ಸಂಭ್ರಮದಿಂದ ಸೋಲಿಗರ ಮತದಾನ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಎಥ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ.
ಮತಗಟ್ಟೆಯತ್ತ ವನವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಸ್ವಾಗತ ಕಮಾನು, ಬಣ್ಣಬಣ್ಣದ ಬಾವುಟಗಳು, ಜನಪದ ಚಿತ್ರಗಳನ್ನು ಮತಗಟ್ಟೆಯಲ್ಲಿ ರಚಿಸಿ ಹೊಸ ಲುಕ್ ಕೊಟ್ಟಿದ್ದು ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ.
ಹಿರಿಯರು, ವಿಶೇಷ ಚೇತನರಿಗಾಗಿ ವೀಲ್ ಚೇರ್ ವ್ಯವಸ್ಥೆ ಕೂಡ ಮಾಡಿದ್ದು ಸೋಲಿಗರು ಉತ್ಸಾಹದಿಂದ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉಳಿದಂತೆ, ಚಾಮರಾಜನಗರ ಜಿಲ್ಲಾಧ್ಯಂತ ಮತದಾನ ಬಿರುಸಿನಿಂದ ನಡೆಯುತ್ತಿದ್ದು 11 ರ ಸುಮಾರಿಗೆ 5% ಮತದಾನ ನಡೆದಿರುವುದಾಗಿ ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























