ಮಣಿಪುರದ ಹಿಂಸಾಚಾರ ಮತ್ತು ಬೆತ್ತಲೆ ಮೆರವಣಿಗೆ ಖಂಡಿಸಿ ವೆಲ್ಪೇರ್ ಪಾರ್ಟಿ ಪ್ರತಿಭಟನೆ

protest
29/07/2023

ಮಣಿ‌ಪುರದ ವಿಷಯದಲ್ಲಿ ಮೋದಿ ಮತ್ತು ಬಿರೇನ್ ಸಿಂಗ್ ಸರಕಾರದ ಸೋಗಲಾಡಿತನ ಎದ್ದು ಕಾಣುತ್ತಿದೆ. ಬೆತ್ತಲೆ ಪ್ರಕರಣವು ದೇಶದ ಅಪಾಯದ ಮುನ್ಸೂಚನೆಯಾಗಿದೆ. ಈ ಅಪಾಯದ ಕುರಿತು ಜನ ಸಾಮಾನ್ಯರು ಮೌನವಹಿಸಿದರೆ ನಾಳೆ ನಮ್ಮ ಕಾಲಬುಡಕ್ಕೆ ಬರಬಹುದು ಎಂದು ವೆಲ್ಫೇರ್ ಪಕ್ಷದ ರಾಜ್ಯ ಅಧ್ಯಕ್ಷ ತಾಹೀರ್ ಹುಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟ್ಟಿನ ಬಸ್ ನಿಲ್ದಾಣ ಬಳಿ ಮಣಿಪುರ ರಾಜ್ಯದ ನರಮೇಧ ಖಂಡಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ದ.ಕ ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಸರ್ಫಾರಾಝ್, ಮಣಿಪುರ ರಾಜ್ಯ ಮತ್ತು ಮೋದಿ ಸರಕಾರದ ಕಾನೂನು ಸುವ್ಯವಸ್ದೆಯ ವೈಫಲ್ಯವೇ ಮಣಿಪುರದ ದಂಗೆಗೆ ಮೂಲ ಕಾರಣ. ಡಬಲ್ ಇಂಜಿನ್ ಸರಕಾರಕ್ಕೆ ಶಾಂತಿ ಸ್ದಾಪಿಸುವ ಇಚ್ಚಾಶಕ್ತಿ ಇಲ್ಲ. ಸದನದಲ್ಲಿ ಚರ್ಚೆ ನಡೆಯುವಾಗ ಪ್ರಧಾನಿ ಮೋದಿ ಗೈರು ಅವರ ಉಡಾಫೆಯನ್ನು ತೋರಿಸುತ್ತದೆ. ಕೂಡಲೇ ಮಣಿಪುರ ಸರಕಾರ ವಜಾ ಮಾಡಿ ರಾಷ್ಟ್ರ ಪತಿ ಆಡಳಿತ ಜಾರಿಗೆ ಬರಬೇಕು ಎಂದು ಒತ್ತಾಯ‌ಪಡಿಸಿದರು.

ಬೆತ್ತಲೆ ಪ್ರಕರಣ ದೇಶದ ಇತಿಹಾಸದ ಕಪ್ಪು ಚುಕ್ಕೆಯಾಗಿದೆ. ಈ ಪ್ರಕರಣದಿಂದ ಪ್ರಧಾನಿ ಮೋದಿ ಬೆತ್ತಲೆಗೊಂಡಿದ್ದಾರೆ. ಕೂಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ ಯಾರೂ ಕೂಡ ಸಹಿಸಲು ಸಾದ್ಯವಿಲ್ಲ. ಕೋಮು, ಜನಾಂಗೀಯ ಹಿಂಸಾಚಾರ ನಡೆದರೆ ಮೊದಲ ಬಲಿಪಶು ಮಹಿಳೆಯಾಗಿದ್ದಾಳೆ. ಬಿಲ್ಕೀಸ್ ಬಾನು , ಹತ್ರಾಸ್ ದಲಿತ ಯುವತಿ, ಮಹಿಳಾಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವಾದಾಗ ಪ್ರಧಾನಿಯವರು ಏಕೆ ಮೌನ ವಹಿಸುತ್ತಾರೆ ಎಂದು ಮಹಿಳಾ ಹೋರಾಟಗಾರ್ತಿ, ಸಾಹಿತಿ ಬಿಎಂ ಸಿಹಾನ ಪ್ರಶ್ನಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ವೆಲ್ಪೇರ್ ಪಾರ್ಟಿ ಕರ್ನಾಟಕ ಉಪಾಧ್ಯಕ್ಷ ಶ್ರೀಕಾಂತ್ ‌ಸಲ್ಯಾನ್, ಮಂಗಳೂರು ವಿಧಾನ‌ಸಭಾ ಅಧ್ಯಕ್ಷ ಸಿ.ಎಚ್ ಅಬ್ದುಲ್ ಸಲಾಂ ಮಾತನಾಡಿದರು. ಫಾರೂಕ್ ಅಳೇಕಲ ಸ್ವಾಗತಿಸಿ, ಧನ್ಯವಾದಗೈದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version