3:43 PM Thursday 11 - September 2025

ಕೊಳ್ಳೇಗಾಲದಲ್ಲಿ ತಿಮಿಂಗಲ ವಾಂತಿ ಸಾಗಟ: 15 ಕೆಜಿ ಮಾಲು ಸಮೇತ ನಾಲ್ವರ ಬಂಧನ

kollegalla
26/02/2023

ಚಾಮರಾಜನಗರ: ಒಂದು ಕೆ.ಜಿ.ಗೆ ಕೋಟಿ ಬೆಳೆಬಾಳಲಿದೆ ಎನ್ನುವ ತಿಮಿಂಗಲ ವಾಂತಿ(ಆಂಬರ್ ಗ್ರೀಸ್) ನ್ನು ಕೆಜಿಗಟ್ಟಲೇ ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲ ಬಸ್ ನಿಲ್ದಾಣ ಸಮೀಪ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅಲ್ಲಮಜ್ಜಿ ರಸ್ತೆಯ ಕೆ.ಬಿ.ವಿರೂಪಾಕ್ಷ(62), ಕೇರಳ ಮೂಲದ ಶಂಸುದ್ಧೀನ್ ಒತಿಯೋತ್(48), ತ್ರೆಸೀಮಾ ವರ್ಘಸೆ@ ಸುಜಾ(55) ಹಾಗೂ ಸಜಿ ಸುಬಾಸ್ (41) ಬಂಧಿತ ಆರೋಪಿಗಳು.

ಇವರುಗಳು ಬೆಂಗಳೂರಿನ ಕಡೆಯ ಕಾಳಸಂತೆಯಲ್ಲಿ ಆಂಬರ್ ಗ್ರಿಸ್(ತಿಮಿಂಗಿಲ ವಾಂತಿ) ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪೊಲೀಸರು ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 14 ಕೆ.ಜಿ 950 ಗ್ರಾಂ ಆಂಬರ್ ಗ್ರಿಸ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version