11:21 PM Tuesday 14 - October 2025

ಯಾವ ಅಪರಾಧಕ್ಕಾಗಿ ಬೆದರಿಕೆ ಹಾಕುತ್ತಿದ್ದೀರಿ?: ಶಾಸಕ ರಘುಪತಿ ಭಟ್ ಗೆ ಹಿಜಾಬ್ ಪರ ವಿದ್ಯಾರ್ಥಿನಿ ಪ್ರಶ್ನೆ

hijab raghupati bhat
23/04/2022

ಉಡುಪಿ: ನನಗೆ ಮತ್ತು ರೇಶಮ್ ಫಾರೂಕ್ ಗೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ನಿರಾಕರಿಸಲಾಗಿದೆ. ನಾವು ಮತ್ತೆ ಮತ್ತೆ ನಿರಾಸೆಗೊಳಗಾಗುತ್ತಿದ್ದೇವೆ ಎಂದು ಹಿಜಾಬ್ ಪರ ಹೋರಾಟಗಾರ್ತಿ, ವಿದ್ಯಾರ್ಥಿನಿ ಆಲಿಯಾ ಅಸಾದಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ನಿರಾಕರಿಸಲಾಯಿತು. ನಾವು ಮತ್ತೆ ಮತ್ತೆ ನಿರಾಸೆಗೊಳಗಾಗುತ್ತಿದ್ದೇವೆ. ನಾಳೆ ಪರೀಕ್ಷೆಗೆ ಹಾಜರಾಗಲು ಹೋದರೆ ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಶಾಸಕ ರ‍ಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ನಾವು ಮಾಡಿರುವ ಅಪರಾಧ ಏನು? ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ನಿನ್ನೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ  ನಿರಾಸೆ ಕಾದಿತ್ತು. ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಗೆ ಅವಕಾಶ ನಿರಾಕರಿಸಿದ ಕಾರಣ ವಿದ್ಯಾರ್ಥಿನಿಯರು ವಾಪಸ್ ತೆರಳಿದ್ದರು. ಈ ನಡುವೆ ಶಾಸಕ ರಘುಪತಿ ಭಟ್ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ನ್ಯಾಯಾಲಯದ ತೀರ್ಪು ಬಂದರೂ ಪರೀಕ್ಷಾ ಕೇಂದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ, ಇತರ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡಿದ್ದಾರೆ. ಇದು ಸಹಿಸಲಸಾಧ್ಯ. ಅಹಂ, ದರ್ಪ ಇದೆಲ್ಲ ಮನೆಯಲ್ಲಿ ಇಟ್ಟುಕೊಳ್ಳಲಿ, ನ್ಯಾಯಾಲಯದ ಆದೇಶ ಪಾಲಿಸಲು ನಾವು ಬದ್ಧರಿದ್ದೇವೆ. ಇದನ್ನೇ ಮುಂದುವರೆಸಿದರೆ ಶೈಕ್ಷಣಿಕ ಭವಿಷ್ಯವೇ ಅಯೋಮಯವಾದೀತು, ಎಚ್ಚರ ಎಂದು ರಘುಪತಿ ಭಟ್ ವಿದ್ಯಾರ್ಥಿನಿಯರ ವಿರುದ್ಧ ಟ್ವೀಟ್ ಮಾಡಿದ್ದರು.

ಪರಿಕ್ಷಾ ಕೇಂದ್ರದಲ್ಲಿ ಹಿಜಾಬ್‌ ಗೆ ಅವಕಾಶ ಕೇಳಿ ಪರೀಕ್ಷೆ ಹಾಜರಾದ ಇತರ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ತಂದಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಆಗ್ರಹಿಸುತ್ತೇನೆ ಎಂದು ರಘುಪತಿ ಭಟ್ ಟ್ವೀಟ್ ಮಾಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅವಳಿ ಮಕ್ಕಳಿಗೆ ಹಾಲುಣಿಸುತ್ತಿದ್ದ ವೇಳೆ ಕುಸಿದುಬಿದ್ದು ತಾಯಿ ಸಾವು

ಜಾಲಿ ರೈಡ್:  ಬೈಕ್ ಸಹಿತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಸಿನಿಮಾದಲ್ಲಿ ಕುಡಿಯೋದು ಸೇದುವುದು ತಪ್ಪಾದರೆ, ಅನುಮತಿ ನೀಡಿರುವ ಸರ್ಕಾರ ಸರಿಯೇ? | ನಟ ಉಪೇಂದ್ರ ಪ್ರಶ್ನೆ

ಧಮ್ ಇದ್ರೆ, ಎಸ್‌ ಡಿಪಿಐ, ಆರ್‌ಎಸ್‌ಎಸ್, ಬಜರಂಗಳವನ್ನು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್

ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಬೈಕ್ ನಲ್ಲಿ ಜಾಲಿ ರೈಡ್: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ

Exit mobile version