ಬೈದರು ಯಾಕೆ ಅಂತ ಹೇಳಲಿಲ್ಲ, ತಪ್ಪು ಮಾಡಿಲ್ಲ, ದ್ವೇಷ ಯಾಕೆ ಕಾರುತ್ತಿದ್ದಾರೆ?: ವೀರೇಂದ್ರ ಹೆಗ್ಗಡೆ

ಉಜಿರೆ: ಯಾವ ತಪ್ಪೂ ಮಾಡಿಲ್ಲ, ನನ್ನ ಮೇಲೆ ಕೆಲವರು ಯಾಕೆ ದ್ವೇಷಕಾರುತ್ತಿದ್ದಾರೆ, ಯಾಕೆ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶುಕ್ರವಾರ ಧರ್ಮಸ್ಥಳ ಮಂಜುನಾಥ ಸನ್ನಿಧಿ ಮತ್ತು ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಶುಕ್ರವಾರ ಸಾಮೂಜಿಕ ಪ್ರಾರ್ಥನೆ ಮತ್ತು ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ವಿಷಯಗಳ ಹಿಂದೆ ಏನೆಲ್ಲ ಇದೆ, ಯಾಕೆ ಇದೆ ಎಂಬುದು ತಿಳಿದಿದೆ, ಯಾಕೆ ಕೋಪ ಎಂದು ತಿಳಿದಿಲ್ಲ, ಬೆಂಬಿಡದೇ ಕಾಡುವ ಬೇತಾಳನಂತೆ ಅಪಚಾರಗಳು ಬಂದಾಗ ಊರ ಜನರು, ಕ್ಷೇತ್ರದ ಭಕ್ತರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಜೀವಂತವಾಗಿರಿಸಿದೆ ಎಂದು ಅವರು ಹೇಳಿದರು.
ಬಹಳ ಮಂದಿ ನಿರಂತರವಾಗಿ ಬೈದರು. ಆದ್ರೆ ಯಾಕೆ ಬೈಯುತ್ತಿದ್ದಾರೆ ಅಂತ ಹೇಳಲೇ ಇಲ್ಲ, ತಪ್ಪು ಮಾಡಲಿಲ್ಲ, ಯಾರನ್ನೂ ಹೀಯಾಳಿಸಲಿಲ್ಲ ಎಂಬ ಆತ್ಮ ವಿಶ್ವಾಸ ಮತ್ತು ಊರವರು ಇರಿಸಿದ ನಂಬಿಕೆಯಿಂದ ನಿಶ್ಚಿಂತನಾಗಿದ್ದೇನೆ ಎಂದರು.
ಸರ್ಕಾರಕ್ಕೆ ಕೃತಜ್ಞತೆ:
ಎಸ್ ಐಟಿ ತನಿಖೆ ಪ್ರಗತಿಯಲ್ಲಿರುವಾಗ ಯಾವುದೇ ಹೇಳಿಕೆ ನೀಡಬೇಕು ಅಂತ ವಕೀಲರು ತಿಳಿಸಿದ್ದರು. ಈಗ ನಿರ್ಭಯನಾಗಿರುವುದರಿಂದ ಮಾತನಾಡುತ್ತಿದ್ದೇನೆ. ಎಸ್ ಐಟಿ ರಚಿಸಿದ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ಧರ್ಮಸ್ಥಳದಲ್ಲಿ ಕೆಟ್ಟ ಕೆಲಸಗಳು ನಡೆಯಲು ಸಾಧ್ಯವಿಲ್ಲ ಅಂತ ಭಕ್ತರು, ಸ್ವಾಮೀಜಿಗಳು ಹೇಳಿದ್ದಾರೆ. ತಪ್ಪು ಮಾಡಿದವರನ್ನು ಮಂಜುನಾಥ ಸ್ವಾಮಿ, ಅಣ್ಣಪ್ಪ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD