9:10 AM Wednesday 15 - October 2025

ಆಸ್ತಿ ವಿವಾದ ಬಗೆಹರಿಸಲು ಬಂದ ಕೌನ್ಸಿಲರ್, ಎಸ್ ಐಯನ್ನು ಅಟ್ಟಾಡಿಸಿ ಹೊಡೆದ ಮಹಿಳೆ | ವಿಡಿಯೋ ವೈರಲ್

thiruvalla crime news
01/08/2021

ಪತ್ತನಂತಿಟ್ಟ: ಆಸ್ತಿ ವಿವಾದವನ್ನು ಬಗೆಹರಿಸಲು ಬಂದಿದ್ದ, ಎಸ್ ಐ ಹಾಗೂ ಕೌನ್ಸೀಲರ್ ನ್ನು ಮಹಿಳೆಯೊಬ್ಬರು ಅಟ್ಟಾಡಿಸಿ ಹೊಡೆದ ಘಟನೆಯೊಂದ ಕೇರಳದ  ತಿರುವಲ್ಲದಲ್ಲಿ ನಡೆದಿದ್ದು, ಎಸ್ ಐ ಹಾಗೂ ಕೌನ್ಸೀಲರ್ ಮೇಲೆ ದಾಳಿ ನಡೆಸಿದ ಮಹಿಳೆ ಕೌನ್ಸಿಲರ್ ನ್ನು ಓಡಿಸಿ ದೊಡ್ಡ ಕಲ್ಲೊಂದನ್ನು ಎತ್ತಿ ಎಸೆದಿರುವ ವಿಡಿಯೋವೊಂದು ವೈರಲ್ ಆಗಿದೆ.

ಅಮ್ಮಾಳ್ ಹಾಗೂ ಆಕೆಯ ಅತ್ತಿಗೆ ಇಬ್ಬರ ಪತಿಯೂ ಸಾವನ್ನಪ್ಪಿದ್ದು, ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರ ನಡುವೆ ಆಸ್ತಿ ವಿವಾದವಿತ್ತು ಈ ನಡುವೆ ಅಮ್ಮಾಳ್ ತನ್ನ ಅತ್ತಿಗೆಯ ಮನೆಯ ಬದಿಯಲ್ಲಿ ನಿರ್ಮಿಸಲಾಗಿದ್ದು, ಶೌಚಾಲಯವನ್ನು ಕೆಡವಿದ್ದು, ಇದರಿಂದಾಗಿ ಈ ಗಲಾಟೆ ಮತ್ತೆ ಉಲ್ಬಣಗೊಂಡಿದೆ.

ಈ ವಿವಾದವನ್ನು ಪರಿಹರಿಸಲು ತಿರುವಲ್ಲ ಮಹಾನಗರ ಪಾಲಿಕೆಯ 11ನೇ ವಾರ್ಡ್ ನ ಕೌನ್ಸಿಲರ್ ಜಾಕೋಬ್ ಜಾರ್ಜ್ ಮನಕ್ಕಲ್ ಮತ್ತು ಎಸ್ ಐ ರಾಜನ್ ಅವರು ಸೌಹಾರ್ದಯುತವಾಗಿ ಮಾತುಕತೆ ನಡೆಸಲು ಅಮ್ಮಾಳ್ ಅವರ ಬಳಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಈ ವೇಳೆ ಅಮ್ಮಾಳ್ ಅವರು ರಾಜನ್ ಹಾಗೂ ಜಾರ್ಜ್ ವಿರುದ್ಧ ಗರಂ ಆಗಿದ್ದು, ಮಾತುಕತೆ ಮುರಿದು ಬಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಮುಂದುವರಿದಿದೆ. ಎನ್ ಐ ರಾಜ್ ನ್ನು ಮೊದಲು ತಳ್ಳಿ ನೆಲಕ್ಕೆ ಬೀಳಿಸಿದ ಅಮ್ಮಾಳ್ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಕೌನ್ಸಿಲರ್ ಜಾರ್ಜ್ ಅವರ ಕೈಯಲ್ಲಿದ್ದ ಮೊಬೈಲ್ ನ್ನು ಕಿತ್ತು  ಅಮ್ಮಾಳ್ ನೆಲಕ್ಕೆ ಎಸೆದಿದ್ದು, ಈ ವೇಳೆ ಕೌನ್ಸಿಲರ್ ಕೋಪದಿಂದ ಅಮ್ಮಾಳ್ ಅವರನ್ನು ನೆಲಕ್ಕೆ ತಳ್ಳಿ ಹಾಕಿದ್ದು, ಇದರಿಂದ ಕೋಪಗೊಂಡ ಅಮ್ಮಾಳ್ ಸ್ಥಳದಲ್ಲಿದ್ದ ದೊಡ್ಡ ಗಾತ್ರದ ಕಲ್ಲೊಂದನ್ನು ತೆಗೆದು ಕೌನ್ಸಿಲರ್ ನ್ನು ಅಟ್ಟಾಡಿಸಿ ಕಲ್ಲೆಸೆದಿದ್ದು, ಅಮ್ಮಾಳ್ ಅವರ ದಾಳಿಯನ್ನು ಸಹಿಸಲು ಸಾಧ್ಯವಾಗದೇ ಕೌನ್ಸಿಲರ್ ಸ್ಥಳದಿಂದ ಎದ್ದೂ ಬಿದ್ದು ಓಡಿದ್ದು, ಅವರ ಜೊತೆಗೆ ಎಸ್ ಐ ರಾಜನ್ ಕೂಡ ಕಾಲ್ಕಿತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನೂ ಘಟನೆಯನ್ನು ನೆರೆಹೊರೆಯವರು ವಿಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಕರೆತರದ ಹಿನ್ನೆಲೆಯಲ್ಲಿ ಎಸ್ ಐ ರಾಜನ್ ಅವರು ಕೌನ್ಸಿಲರ್ ಹಾಗೂ ತನ್ನ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಲು ವಿಫಲರಾಗಿದ್ದಾರೆ.

ವಾರ್ಡ್ ಕೌನ್ಸಿಲರ್ ಮತ್ತು ಎಸ್ ಐ ಮೇಲೆ ಹಲ್ಲೆ ನಡೆಸಿರುವುದಕ್ಕಾಗಿ ಅಮ್ಮಾಳ್ ವಿರುದ್ಧ ತಿರುವಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಅಮ್ಮಾಳ್ ಅವರು ತಿರುವಲ್ಲ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಮೇಲೆ ಪೊಲೀಸ್ ಹಾಗೂ ಕೌನ್ಸಿಲರ್ ದೌರ್ಜನ್ಯ ನಡೆಸಿರುವುದಾಗಿ ಅವರು ಆರೋಪಿಸಿದ್ದಾರೆ.

YouTube video player

ಇನ್ನಷ್ಟು ಸುದ್ದಿಗಳು…

ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ

ಮೇಕೆದಾಟು: “ರಾಜಕೀಯಕ್ಕಾಗಿ ಅಣ್ಣಾಮಲೈ ಉಪವಾಸ ಮಾಡುತ್ತಿದ್ದಾರೆ” | ಪಕ್ಷ ಒಂದು, ಅಭಿಪ್ರಾಯ ಎರಡಾಗಿದ್ದು ಹೇಗೆ?

ನಟಿ ಶಕೀಲ ಸಾವಿನ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಅವರು ಹೇಳಿದ್ದೇನು ಗೊತ್ತಾ?

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಾಲೆಗಳು: ಅನುಮತಿ ಇಲ್ಲದೆಯೇ ಶಾಲೆ ಆರಂಭಕ್ಕೆ ಮುಂದಾಯ್ತೇ ರುಪ್ಸಾ?

ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಅಣ್ಣ-ತಂಗಿ!

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!

ಇತ್ತೀಚಿನ ಸುದ್ದಿ

Exit mobile version