11:46 PM Saturday 23 - August 2025

ಹೃದಯ ವಿದ್ರಾವಕ ಘಟನೆ: ತೋಟದ ಕೆರೆಗೆ ಬಿದ್ದು 1 ವರ್ಷದ ಮಗು ದಾರುಣ ಸಾವು

death 2
22/01/2024

ಬೆಳ್ತಂಗಡಿ: ತೋಟದ ಕೆರೆಗೆ ಬಿದ್ದು 1 ವರ್ಷ ವಯಸ್ಸಿನ ಮಗುವೊಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ನಾಜೆ ಎಂಬಲ್ಲಿ ನಡೆದಿದೆ.

ಸೋಮವಾರ ಈ ಘಟನೆ ನಡೆದಿದ್ದು, ನಡ ಗ್ರಾಮದ ಕನ್ನಾಜೆ ನಿವಾಸಿಯಾಗಿರುವ ರೋಷನ್ ಡಿಸೋಜ ಹಾಗೂ ಉಷಾ ಡಿಸೋಜ ದಂಪತಿಯ ಪುತ್ರ ರೇಯನ್ ಡಿಸೋಜ ಮೃತಪಟ್ಟ ಮಗುವಾಗಿದೆ.

ಮನೆಯ ಸಮೀಪವೇ ಇದ್ದ ತೋಟದ ಕೆರೆಯಲ್ಲಿ ಮಗು ಬಿದ್ದಿರುವುದನ್ನು ಗಮನಿಸಿದ ಮನೆಯವರು ತಕ್ಷಣವೇ ಲಾಯಿಲದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version