ಊಟದ ಆಸೆಯಿಂದ ಮದುವೆ ಮನೆಗೆ ಬಂದ ಯುವಕನನ್ನು ಗುಂಡು ಹಾರಿಸಿ ಕೊಂದರು!

shoot
01/12/2025

ನವದೆಹಲಿ: ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಊಟದ ಆಸೆಯಿಂದ ಬಂದಿದ್ದ 17 ವರ್ಷದ ಕೊಳೆಗೇರಿ ಯುವಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಮಾನಸ ಸರೋವರ ಪಾರ್ಕ್‌ನ ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಶನಿವಾರ ಸಂಜೆ ನಡೆದಿದೆ.

ಯುವಕನಿಗೆ ಮದುವೆಗೆ ಆಹ್ವಾನ ಇರಲಿಲ್ಲ, ದಾರಿಯಲ್ಲಿ ಹೋಗುತ್ತಿದ್ದ ವೇಳೆ ಮದುವೆ ನಡೆಯುತ್ತಿರುವುದನ್ನು ಗಮನಿಸಿದ ಯುವಕ ಊಟದ ಆಸೆಯಿಂದ  ಕಾಂಪೌಂಡ್ ಹಾರಿದ್ದಾನೆ. ಈ ವೇಳೆ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಈ ವೇಳೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಉತ್ತರ ಪ್ರದೇಶದ ಕಾನ್ಸುರದ ಸಿಐಎಸ್‌ ಎಫ್‌ ನ ಹೆಡ್‌ ಕಾನ್‌ ಸ್ಟೆಬಲ್‌ ವೊಬ್ಬ ಕೋಪದಿಂದ ಯುವಕನ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡೇಟಿನಿಂದ ಗಂಭಿರವಾಗಿ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಸಿಪಿ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ.

ಆಹಾರದ ಆಸೆಯಿಂದ ಬಂದಿದ್ದ ಯುವಕನನ್ನು ಹೊರ ಹಾಕಿದ್ದರೂ, ಪರವಾಗಿರಲಿಲ್ಲ, ಆದರೆ ಗುಂಡು ಹಾರಿಸಿ ಕೊಲ್ಲುವಷ್ಟು ವಿಕೃತಿ ಏಕೆ ಎನ್ನುವ ಆಕ್ರೋಶ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ. ಸಾರ್ವಜನಿಕರ ರಕ್ಷಣೆಗೆ ಬಳಸ ಬೇಕಿದ್ದ ಬಂದೂಕನ್ನು ಕಿಡಿಗೇಡಿ ಅಧಿಕಾರಿಯೊಬ್ಬ ಬಡ ಯುವಕನ ಪ್ರಾಣ ತೆಗೆಯಲು ಬಳಸಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version