11:11 AM Saturday 23 - August 2025

30 ಕೋಟಿ ರೂ. ವಂಚನೆ: ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್ ಬಂಧನ

arrest
17/02/2022

ಬೆಂಗಳೂರು: ಚಿಟ್ ಫಂಡ್, ಫೈನಾನ್ಸ್ ಹೆಸರಲ್ಲಿ ಹತ್ತಾರು ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್​ನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಅನಂತರಾಮ್ ಬಂಧಿತ ಆರೋಪಿ. ಆರೋಪಿಯು 2009ರಲ್ಲಿ ಪಂಚಮುಖಿ ಚಿಟ್ ಫಂಡ್ ತೆರೆದಿದ್ದು, ಚೀಟಿ, ಫೈನಾನ್ಸ್, ವಾಹನ ಸಾಲ ಹೀಗೆ ಹತ್ತಾರು ವ್ಯವಹಾರ ಮಾಡುತ್ತಿದ್ದರು. ಸುಮಾರು 400 ಗ್ರಾಹಕರನ್ನ ಹೊಂದಿದ್ದ ಸಂಸ್ಥೆಯಾಗಿತ್ತು. ಜನರಿಗೆ 30 ಕೋಟಿಯಷ್ಟು ಹಣವನ್ನು ವಂಚಿಸಿದ ಆರೋಪಿ ಕಳೆದ 10 ದಿನಗಳ ಹಿಂದೆ ಚಿಟ್ ಫಂಡ್​ಗೆ ಬಾಗಿಲು ಹಾಕಿ ಪರಾರಿಯಾಗಿದ್ದರು.

ವರ್ಷಕ್ಕೆ ಶೇ. 24 ಬಡ್ಡಿ ಆಸೆ ತೋರಿಸಿ ವಂಚಿಸಿರುವ ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಬನಶಂಕರಿ ಠಾಣಾ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ:  ಸಿ.ಟಿ.ರವಿ

ಬ್ರೆಜಿಲ್: ಭೀಕರ ಪ್ರವಾಹ, ಭೂ ಕುಸಿತಕ್ಕೆ 94ಕ್ಕೂ ಹೆಚ್ಚು ಮಂದಿ ಬಲಿ

ಬಸ್‌- ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ನಿಧನ

ಇತ್ತೀಚಿನ ಸುದ್ದಿ

Exit mobile version