ಲೆಬನಾನ್ ನಲ್ಲಿ ಸ್ಫೋಟ: 32 ಸಾವು, 3,250 ಕ್ಕೂ ಹೆಚ್ಚು ಜನರಿಗೆ ಗಾಯ

19/09/2024

ಕಳೆದೆರಡು ದಿನಗಳಲ್ಲಿ ಲೆಬನಾನ್ ನಾದ್ಯಂತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಮತ್ತು ಪೇಜರ್ ಗಳು ಸ್ಫೋಟಗೊಂಡಿದ್ದರಿಂದ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಬೈರುತ್ ನಲ್ಲಿ ಸ್ಫೋಟಗೊಂಡು ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಮೊನ್ನೆ ಕೊಲ್ಲಲ್ಪಟ್ಟವರಿಗಾಗಿ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆಯ ಬಳಿ ಬುಧವಾರದ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ.

ಲೆಬನಾನ್ ನಾದ್ಯಂತ ಹಿಜ್ಬುಲ್ಲಾ ಬಳಸುತ್ತಿದ್ದ ಸಾವಿರಾರು ಪೇಜರ್ ಗಳು ಸ್ಫೋಟಗೊಂಡು ಇಬ್ಬರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿ, ಸುಮಾರು 2,800 ಜನರು ಗಾಯಗೊಂಡ ಒಂದು ದಿನದ ನಂತರ ಈ ಸ್ಫೋಟಗಳು ನಡೆದಿವೆ.

ಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ ಸಂಪೂರ್ಣ ಹೊಣೆ ಎಂದು ಹಿಜ್ಬುಲ್ಲಾ ಹೇಳಿದೆ ಮತ್ತು ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಸ್ಫೋಟದ ಬಗ್ಗೆ ಇಸ್ರೇಲ್ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version