8:07 PM Wednesday 15 - October 2025

4 ಕಾರು, 1 ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪರಾರಿ

ashraf ghani
16/08/2021

ಮಾಸ್ಕೋ: ಉಗ್ರರು ಅಫ್ಘಾನ್ ನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನಾಲ್ಕು ಕಾರು ಹಾಗೂ ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ದೇಶದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು,  ಹೆಲಿಕಾಫ್ಟರ್ ನಲ್ಲಿ ಸಾಗಿಸಲು ಸಾಧ್ಯವಾಗದ ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ಕಾಬೂಲ್ ನಲ್ಲಿರುವ ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.

ಸದ್ಯ ಅಶ್ರಫ್ ಘನಿ ಎಲ್ಲಿದ್ದಾರೆಂದು ತಿಳಿದು ಬಂದಿಲ್ಲ. ತಾಲಿಬಾನ್ ಉಗ್ರರು ಕಾಬುಲ್ ಗೆ ನೇರವಾಗಿ ಪ್ರವೇಶಿಸಿದ್ದಾರೆ. ಈ ಪ್ರವೇಶದ ಸಂದರ್ಭದಲ್ಲಿ ಅಫ್ಘಾನ್ ಮಿಲಿಟರಿ ಪಡೆಯೊಂದಿಗೆ ಯಾವುದೇ ಘರ್ಷಣೆಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಇನ್ನೂ ಕಾಬುಲ್ ನಲ್ಲಿ ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿ ರಷ್ಯಾ ಹೇಳಿದೆ. ತಾಲಿಬಾನ್ ಗಳನ್ನು ದೇಶದ ಆಡಳಿತಗಾರರನ್ನಾಗಿ ಗುರುತಿಸಲು ಯಾವುದೇ ಆತುರವಿಲ್ಲ. ಅವರೊಂದಿಗೆ ಬಾಂಧವ್ಯ ವೃದ್ಧಿಸುವ ಭರವಸೆ ಇದೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಮಂಗಳೂರಿನಲ್ಲಿ 1,725 ಕೆ.ಜಿ. ಅಪಾಯಕಾರಿ ಸ್ಫೋಟಕ ಪತ್ತೆ! | ಆರೋಪಿ ಅರೆಸ್ಟ್

ಉಗ್ರರ ಅಟ್ಟಹಾಸಕ್ಕೆ  ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು

ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು

ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು

ಇತ್ತೀಚಿನ ಸುದ್ದಿ

Exit mobile version