8:18 AM Wednesday 27 - August 2025

ಟ್ರಕ್ ಗೆ ಡಿಕ್ಕಿ ಹೊಡೆದ ಮತ್ತೊಂದು ಟ್ರಕ್: ಸರಣಿ ಅಪಘಾತಕ್ಕೆ ನಾಲ್ವರು ಬಲಿ

vehicle collision In tamil nadu
25/01/2024

ಧರ್ಮಪುರಿ:  ನಾಲ್ಕು ವಾಹನಗಳ ನಡುವೆ ನಡೆದ ಭೀಕರ ಸರಣಿ ಅಪಘಾತವೊಂದರಲ್ಲಿ ನಾಲ್ವರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

ವೇಗವಾಗಿ ಬಂದ ಟ್ರಕ್ ವೊಂದು ಇನ್ನೊಂದು ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ಇದು ಸರಣಿ ಅಪಘಾತಕ್ಕೆ ಕಾರಣವಾಗುತ್ತದೆ.  ಈ ಎರಡು ಲಾರಿಗಳ ನಡುವೆ  ಕಾರು ಸಿಲುಕಿಕೊಂಡಿದ್ದು  ಸ್ಥಳದಲ್ಲೇ ಕಾರು ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣವಾದ ಟ್ರಕ್  ಸೇತುವೆಯಿಂದ ಕೆಳಗೆ ಉರುಳಿದ್ದು, ಈ ವೇಳೆ ವಾಹನಗಳಿಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ 2 ಲಕ್ಷ ರೂಪಾಯಿ ಘೋಷಿಸಿದ್ದು, ಘಟನೆಯಲ್ಲಿ ಗಾಯಗೊಂಡ 8 ಜನರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಅಪಘಾತ ನಡೆಯುತ್ತಿದ್ದಂತೆಯೇ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳದಲ್ಲಿ ಅಗ್ನಿಶಾಮಕದಳ ಮತ್ತು ಇತರ ತುರ್ತು ಸೇವೆಗಳನ್ನು ತಕ್ಷಣದಲ್ಲಿ ಒದಗಿಸಲಾಯಿತು.

ಇತ್ತೀಚಿನ ಸುದ್ದಿ

Exit mobile version