10:17 AM Monday 15 - December 2025

ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವು

09/03/2025

ಮುಂಬೈನ ನಾಗಪಾಡಾದ ಮಿಂಟ್ ರಸ್ತೆಯ ಗುಡ್ ಲಕ್ ಮೋಟಾರ್ ತರಬೇತಿ ಶಾಲೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವಾಗ ಕನಿಷ್ಠ ನಾಲ್ಕು ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರನ್ನು ಹಸೀಪಾಲ್ ಶೇಖ್ (19), ರಾಜಾ ಶೇಖ್ (20), ಜಿಯಾವುಲ್ಲಾ ಶೇಖ್ (36) ಮತ್ತು ಇಮಾಂಡು ಶೇಖ್ (38) ಎಂದು ಗುರುತಿಸಲಾಗಿದೆ.

ವಾಟರ್ ಟ್ಯಾಂಕ್ ನಲ್ಲಿದ್ದ ಐದನೇ ಕಾರ್ಮಿಕ ಪುರ್ಹಾನ್ ಶೇಖ್ (31) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳ ಪ್ರಕಾರ, ಮುಂಬೈನ ನಾಗಪಾಡಾದ ಮಿಂಟ್ ರಸ್ತೆಯ ಗುಡ್ ಲಕ್ ಮೋಟಾರ್ ತರಬೇತಿ ಶಾಲೆಯ ಬಳಿ ಮಧ್ಯಾಹ್ನ 12.29 ಕ್ಕೆ ಈ ಘಟನೆ ನಡೆದಿದ್ದು, ಮಧ್ಯಾಹ್ನ 1.35 ಕ್ಕೆ ಮುಂಬೈ ಅಗ್ನಿಶಾಮಕ ದಳ (ಎಂಎಫ್ಬಿ) ವರದಿ ಮಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version