10:02 PM Wednesday 10 - December 2025

5 ಕೋಟಿ ಕೊಟ್ಟರೆ ಮೋದಿಯನ್ನು ಕೊಲ್ಲುತ್ತೇನೆ ಎಂದ ಆರೋಪಿಯ ಬಂಧನ!

06/02/2021

ಪುದುಚೇರಿ: ನನಗೆ 5 ಕೋಟಿ ರೂಪಾಯಿ ಯಾರಾದರೂ ಕೊಟ್ಟರೆ ನಾನು ಮೋದಿಯನ್ನು ಕೊಲ್ಲುವುದಾಗಿ ಫೇಸ್ ಬುಕ್ ಪೋಸ್ಟ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

43 ವರ್ಷದ ಸತ್ಯಾನಂದಂ ಬಂಧಿತ ಆರೋಪಿಯಾಗಿದ್ದು,  ಈತ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿದ್ದು, ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಗುರುವಾರ ಆರೋಪಿಯು ಈ ಪೋಸ್ಟ್ ಹಾಕಿದ್ದ ಇದನ್ನು ಗಮನಿಸಿದ್ದ ಚಾಲಕನೋರ್ವ ಪೊಳೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯ ಫೇಸ್ ಬುಕ್ ಖಾತೆಯನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.

ಆರೋಪಿ ಸತ್ಯಾನಂದನ ವಿರುದ್ಧ ಐಪಿಸಿಯ ಕಲಂ 505(1) ಮತ್ತು 505(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತ ಯಾವ ಉದ್ದೇಶದಿಂದ ಈ ಪೋಸ್ಟ್ ಹಾಕಿದ್ದಾನೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಇತ್ತೀಚಿನ ಸುದ್ದಿ

Exit mobile version