5ನೇ ಹಂತದ ಮತದಾನ‌ ಮುಕ್ತಾಯ: ನಿಖರ ಅಂಕಿ-ಅಂಶ ನೀಡದ ಚುನಾವಣಾ ಆಯೋಗ

21/05/2024

ಸೋಮವಾರ 5ನೇ ಹಂತದ ಮತದಾನ ಮುಗಿದಿದೆ. ಆದರೆ ಮತದಾನದ ನಿಖರ ಅಂಕಿ-ಅಂಶ ಚುನಾವಣಾ ಆಯೋಗ ಇನ್ನೂ ನೀಡಿಲ್ಲ. 60.09% ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ದಿನಗಳ ಬಳಿಕ ನಿಖರ ಅಂಕಿಅಂಶ ನೀಡುವುದಾಗಿ ಆಯೋಗ ಹೇಳಿದೆ.
ಈ ಹಿಂದೆ ನಡೆದ ನಾಲ್ಕು ಹಂತಗಳ ಮತದಾನದಲ್ಲಿಯೂ ಸ್ಪಷ್ಟ ಅಂಕಿಅಂಶ ಪ್ರಕಟಿಸುವಲ್ಲಿ ಆಯೋಗ ವಿಳಂಬ ಮಾಡಿತ್ತು.

ನಿಖರ ಮಾಹಿತಿ ಇನ್ನೂ ನೀಡದ ಚುನಾವಣಾ ಆಯೋಗ, “ನವೀಕರಿಸಿದ ಮತದಾನದ ಪ್ರಮಾಣವನ್ನು ಮೇ 24ರೊಳಗೆ ಲಿಂಗವಾರು ವರ್ಗೀಕರಣದೊಂಧಿಗೆ ಪ್ರಕಟಿಸುವುದಾಗಿ” ಹೇಳಿಕೊಂಡಿದೆ. ಈ ಹಿಂದೆ, ನಾಲ್ಕನೇ ಹಂತದ ಮತದಾನವಾದಾಗ, ಮಾಹಿತಿ ನೀಡಲು 11 ದಿನಗಳನ್ನು ತೆಗೆದುಕೊಂಡಿದ್ದು ಆಯೋಗ ಇದೀಗ ನಾಲ್ಕು ದಿನಗಳ ಅನಂತರ ಮಾಹಿತಿ ನೀಡುವುದಾಗಿ ಹೇಳುತ್ತಿದೆ.
ಅಂದಾಜಿತ ಅಂಕಿಅಂಶಗಳ ಪ್ರಕಾರ, ಮೇ 20ರ ಸಂಜೆ 7.45 ಗಂಟೆಯ ವೇಳೆಗೆ ಎಲ್ಲ 49 ಕ್ಷೇತ್ರಗಳಲ್ಲಿ ಒಟ್ಟು 57.47% ಮತದಾನವಾಗಿದೆ.

5ನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟು 695 ಅಭ್ಯರ್ಥಿಗಳು ಚುನಾವಣೆ ಎದುರಿದ್ದಾರೆ.
ಒಟ್ಟಾರೆಯಾಗಿ ಕಳೆದ 5 ಹಂತಗಳಲ್ಲಿ 25 ರಾಜ್ಯಗಳ 428 ಸ್ಥಾನಗಳಿಗೆ ಮತದಾನ ಮುಗಿದಿದೆ. ಇನ್ನು, 115 ಸ್ಥಾನಗಳಿಗೆ ಮತದಾನ ಬಾಕಿ ಇದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version