9:02 AM Thursday 16 - October 2025

35ರ ಯುವತಿಯನ್ನು ವಿವಾಹವಾದ 75ರ ವೃದ್ಧ: ಮೊದಲ ರಾತ್ರಿ ಬೆಳಗಾಗುವುದರೊಳಗೆ ವೃದ್ಧ ಸಾವು

old man marries
01/10/2025

ಜೌನ್‌ ಪುರ: 75 ವರ್ಷದ ವ್ಯಕ್ತಿಯೊಬ್ಬರು 35 ವರ್ಷದ ಮಹಿಳೆಯನ್ನು ವಿವಾಹವಾಗಿದ್ದು, ವಿವಾಹವಾದ ಮೊದಲ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆಯೇ ವೃದ್ಧ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್‌ ಪುರ ಜಿಲ್ಲೆಯ ಕುಚ್‌ ಮುಚ್ ಗ್ರಾಮದಲ್ಲಿ ನಡೆದಿದೆ.

75 ವರ್ಷದ ಸಂಗ್ರರಾಮ್ ಎಂಬ ವ್ಯಕ್ತಿ ತನ್ನ ಮೊದಲ ಪತ್ನಿ ಸಾವನ್ನಪ್ಪಿದ ನಂತರ ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವಿಸಿದ್ದರು. ನಂತರ ಒಬ್ಬಂಟಿತನದಿಂದ ಬೇಸತ್ತು, ಮತ್ತೊಂದು ವಿವಾಹವಾಗಲು ಸಂಗ್ರರಾಮ್ ನಿರ್ಧರಿಸಿದ್ದರು. ಅವರ ಕುಟುಂಬಸ್ಥರು ಈ ವಯಸ್ಸಿನಲ್ಲಿ ಮದುವೆ ಬೇಡ ಎಂದು ಬುದ್ಧಿ ಹೇಳಿದರೂ ಕೇಳದೇ ಸೆಪ್ಟೆಂಬರ್ 29, ಸೋಮವಾರ, ಅವನು ಜಲಾಲ್‌ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಎಂಬ ಮಹಿಳೆಯನ್ನು ಕಾನೂನು ಪ್ರಕಾರ ನೋಂದಾಯಿಸಿಕೊಂಡು ವಿವಾಹ ಮಾಡಿಕೊಂಡರು. ಬಳಿಕ ಸ್ಥಳೀಯ ದೇವಸ್ಥಾನದಲ್ಲಿ ಸಂಪ್ರದಾಯದಂತೆ ವಿವಾಗವಾಗಿದ್ದರು.

ಮದುವೆಯ ಮೊದಲ ರಾತ್ರಿ ಇಬ್ಬರು ಸಮಯ ಕಳೆದಿದ್ದಾರೆ. ಆದರೆ ಬೆಳಗ್ಗಿನ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು.  ಅಲ್ಲಿ ವೈದ್ಯರು ಸಂಗ್ರರಾಮ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ರಾತ್ರಿ ಹೊತ್ತು ತಾನು ಹಾಗೂ ಪತಿ ಸಾಕಷ್ಟು ಸಮಯಗಳವರೆಗೆ ಮಾತನಾಡುತ್ತಾ ಕಾಲ ಕಳೆದಿರುವುದಾಗಿ ಮನ್ಭವತಿ ಹೇಳಿದ್ದಾರೆ.  ಹಠಾತ್ ಸಾವು ಗ್ರಾಮದಲ್ಲಿ ಹಲವು ಊಹಾಪೋಹಗಳನ್ನು ಸೃಷ್ಠಿಸಿದೆ. ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ವೃದ್ಧನ ಪೋಸ್ಟ್ ಮಾರ್ಟಂಗೆ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version