ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ  ಸ್ವಾತಂತ್ರ್ಯೋತ್ಸವ ಆಚರಣೆ

16/08/2025

ಬಜ್ಪೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕರಂಬಾರು ಇಲ್ಲಿ 79ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರಾಮ ದೇವಾಡಿಗ ಅವರ ಸ್ಮರಣಾರ್ಥ ಕೊಡುಗೆಯಾಗಿ ನಿರ್ಮಿಸಲಾಗಿರುವ ಹೊಸ ಧ್ವಜಸ್ತಂಭವನ್ನು ಅವರ ಧರ್ಮಪತ್ನಿ ಸೀತ ದೇವಾಡಿಗರವರು ಉದ್ಘಾಟಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗರವರು ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು, ದಿ.ರಾಮದೇವಾಡಿಗರ ಸ್ಮರಣಾರ್ಥ ಶಾಲೆಗೆ ನೂತನ ಧ್ವಜಾಸ್ಥಂಭವನ್ನು ಒದಗಿಸಿದ ಸೀತಾ ಹಾಗೂ ಅವರ ಕುಟುಂಬದ ವಗ೯ಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು .

ಈ ದಿನದಂದು ಹಿಂದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಶಾಲಾ ಬಾಲಕಿಯ  ಭಾಷಣವದಿಂದ ಆಕರ್ಷಿತರಾದ ಅವರು, ಇದೆ ರೀತಿ ಪ್ರಾಥಮಿಕ ಶಾಲೆಯ ಮಕ್ಕಳಿಂದಲೇ ದೇಶ ಪ್ರೇಮ ಹುಟ್ಟಿಸಬೇಕು. ಸ್ವಾತಂತ್ಯ್ರ ಪಡೆಯಲು ಹಲವಾರು ಹಿರಿಯರ ತ್ಯಾಗ–ಬಲಿದಾನವಾಗಿದೆ. ಅವರ ನೆನಪು ಅಗೋಸ್ಟ್ 15ರಂದು ಮಾತ್ರ ನೆನಪಿಸಿಕೊಳ್ಳುವುದಲ್ಲ, ಜೀವನದುದ್ದಕ್ಕೂ ಈ ದೇಶದಲ್ಲಿ ಶಾಂತಿ, ಸಹಬಾಳ್ವೆ, ಪ್ರೀತಿ, ಸವ೯ರಲ್ಲೂ ಸಮಾನತೆ, ಸಹಬಾಳ್ವೆಯನ್ನು ಎದುರು ನೋಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ಜಗನ್ನಾಥ್ ಸಾಲಿಯಾನ್ ಮಳವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ ಮಳವೂರಿನ ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ.ಸಮೀಕ್ಷ ಡಿ.ಪಿ., ರಮೇಶ್ ಸುವರ್ಣ, ಮನೋಜ್ ಶೆಟ್ಟಿ, ರವಿ ಶೆಟ್ಟಿ ಉಪಾಧ್ಯಕ್ಷರಾದ ಲಾವಣ್ಯ , ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ರಾಘವೇಂದ್ರ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಾಗತಿಸಿದರು. ಗೀತಾ ಕಾರ್ಯಕ್ರಮವನ್ನು ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version