2:10 PM Saturday 6 - December 2025

ಡಿವೈಡರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು:  ಲೋಕಾಯುಕ್ತ ಇನ್ಸ್​​ಪೆಕ್ಟರ್ ಸಜೀವ ದಹನ

panchakshari salimath
06/12/2025

ಧಾರವಾಡ: ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಲೋಕಾಯುಕ್ತ ಇನ್ಸ್​​ಪೆಕ್ಟರ್ ವೊಬ್ಬರು ಸಜೀವ ದಹನವಾದ ದಾರುಣ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಆಗಿದ್ದ ಪಂಚಾಕ್ಷರಿ ಸಾಲಿಮಠ ಅಪಘಾತಕ್ಕೆ ಬಲಿಯಾದವರಾಗಿದ್ದಾರೆ. ಡಿ.5ರಂದು ಗದಗ ಕಡೆಗೆ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಬೆಂಕಿ ಹತ್ತಿಕೊಂಡು ಉರಿದಿದ್ದು, ಪರಿಣಾಮವಾಗಿ ಅವರು ಸಜೀವ ದಹನವಾಗಿದ್ದಾರೆ.

ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ, ಅಷ್ಟರೊಳಗೆ ಇನ್ಸ್​ಪೆಕ್ಟರ್​ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

PS ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version