800 ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ

dyfi
04/06/2021

ಮಂಗಳೂರು: ಜಪ್ಪಿನಮೊಗರುನಲ್ಲಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮವು ” ಮೋಕ್ಷ” ನಿಧಿ ಜಪ್ಪಿನಮೊಗರು, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ(ರಿ), DYFI ಜಪ್ಪಿನಮೊಗರು ಘಟಕ ಇದರ ನೇತೃತ್ವದಲ್ಲಿ ಹಾಗೂ Y.S.M ಅಂತಾರಾಷ್ಟ್ರೀಯ ಸಂಸ್ಥೆ ಮಂಗಳೂರು ಇವರ ಸಹಕಾರದಲ್ಲಿ ತಾ: 30/05/2021 ಭಾನುವಾರ ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.

ಈ   ಕಾರ್ಯಕ್ರಮದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷರಾದ ಹನೀಫ್ ಜೆ., DYFI ಘಟಕ ಅಧ್ಯಕ್ಷರಾದ ಅಭಿಷೇಕ್, ಕಾರ್ಯದರ್ಶಿಯಾದ ಶಿವಾನ್ ಅಮೀನ್, DYFI ಜಿಲ್ಲಾ ಸಮಿತಿಯ ಮಾಜಿ ಸದಸ್ಯರಾದ ಉದಯಚಂದ್ರ ರೈ. DYFI ಜಿಲ್ಲಾ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಬಜಾಲ್,  ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷರಾದ ಮನೋಜ್ ಪೂಜಾರಿ, ಗೌರವಾಧ್ಯಕ್ಷರಾದ ನವೀನ್ ಕಾರ್ಪೆಂಟರ್,   ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಸೀತರಾಮ ಶೆಟ್ಟಿ, ಚಂದ್ರಹಾಸ್ ಕುಲಾಲ್, ಮನೋಜ್ ಶೆಟ್ಟಿ ಮ.ನ.ಪಾ.ಮಾಜಿ ಕಾರ್ಪೋರೇಟರ್ ರಾದ ಜಯಂತಿ ಬಿ. ಶೆಟ್ಟಿ, ಮಹಿಳಾ ಮುಖಂಡರಾದ ಜಯಲಕ್ಷ್ಮಿ,  Y.S.M ಇದರ ಪದಾಧಿಕಾರಿಗಳು, ಯುವಕ ಮಂಡಲದ ಹಾಗೂ DYFI ನ ಸದಸ್ಯರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಜಪ್ಪಿನಮೊಗರು ಹಾಗೂ ಆಸುಪಾಸಿನ ಗ್ರಾಮದ ಸುಮಾರು 800 ಕುಟುಂಬಕ್ಕೆ 5 kgಯಂತೆ ಅಕ್ಕಿಯನ್ನು ವಿತರಿಸಲಾಯಿತು.

ಇತ್ತೀಚಿನ ಸುದ್ದಿ

Exit mobile version