11:56 PM Thursday 21 - August 2025

4ನೇ ಮಗುವಿನ ತಂದೆಯಾದ 83 ವರ್ಷದ ಖ್ಯಾತ ಹಾಲಿವುಡ್ ನಟ..!

16/06/2023

ಖ್ಯಾತ ಹಾಲಿವುಡ್ ನಟ ಆಲ್ಫ್ರೆಡೋ ಜೇಮ್ಸ್ ಪೆಸಿನೊಗೆ ಸದ್ಯ 83 ವರ್ಷ. ಈ‌ ಹಿರಿಯ ನಟ 29 ವರ್ಷದ ಪ್ರಿಯತಮೆಯಿಂದ ಮಗು ಪಡೆದಿದ್ದಾರೆ. ತನ್ನ ಪ್ರಿಯತಮೆ ನೂರ್ ಅಲ್ಫಾಹ್‌ಗೆ ಗಂಡು ಮಗು ಜನಿಸಿದ್ದು, 4ನೇ ಮಗುವಿನ ತಂದೆಯಾಗಿದ್ದಾರೆ.

ಈ ಮಗುವಿಗೆ ರೋಮನ್ ಪೆಸಿನೋ ಎಂದು ಹೆಸರಿಟ್ಟಿದ್ದಾರೆ. ಬೆವರ್ಲಿ ಡಿ ಏಂಜೆಲೊ ಎಂಬ ಪ್ರಿಯತಮೆಯಿಂದ ಆಂಟೊನ್, ಒಲಿವಿಯಾ ಎಂಬ ಮಕ್ಕಳನ್ನ ಪಡೆದಿದ್ದಾರೆ. ಜಾನ್ ಟೆರಂಟ್ ಎನ್ನುವ ಗೆಳತಿಯಿಂದ ಜೂಲಿ ಮೇರಿ ಎನ್ನುವ ಮಗಳು ಪಡೆದಿದ್ದಾರೆ.

ಪೆಸಿನೋ, ಅಲ್ಫಾಹ್ ಅವರು 2022ರಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಂದಿನಿಂದಲೇ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಸಾಕಷ್ಟು ಬಾರಿ ಡಿನ್ನರ್ ಡೇಟ್ ಕೂಡ ಮಾಡಿದ್ದರು ಎನ್ನಲಾಗಿದೆ.

ಈ ವಿಷಯ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಒಲ್ಡ್ ಈಸ್ ಗೋಲ್ಡ್ ಅಂತಾ ನೆಟ್ಟಿಗರು ಕಾಲೆಳೆಯೋಕೇ ಶುರು ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version