10:17 AM Saturday 23 - August 2025

ಕಲಿಯೋಕೇ ಹೋದವ್ರು ರ‍್ಯಾಗಿಂಗ್ ಮಾಡಿದ್ರು: ಮಾಡಬಾರದ್ದನ್ನು ಮಾಡಿದ ಥಾಣೆ ವೈದ್ಯಕೀಯ ಕಾಲೇಜಿನ 9 ವಿದ್ಯಾರ್ಥಿಗಳು ಸಸ್ಪೆಂಡ್

05/10/2023

ಥಾಣೆಯ ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ಹೊಸದಾಗಿ ಬಂದ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಥಾಣೆ ಮುನ್ಸಿಪಲ್ ಕಮಿಷನರ್ ಒಂಬತ್ತು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ರ‍್ಯಾಗಿಂಗ್ ತಡೆ ನಿಯಮಗಳ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕಾಲೇಜನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನೋಡುತ್ತಿದೆ. ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಲಾಯಿತು. ಜೊತೆಗೆ ಒಂದು ವರ್ಷ ಅಮಾನತುಗೊಳಿಸಲಾಗಿದೆ.
ಕಾಲೇಜು ಹಾಸ್ಟೆಲ್ ನಲ್ಲಿ ರ‍್ಯಾಗಿಂಗ್ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೆಪ್ಟೆಂಬರ್ ನಲ್ಲಿ ದೂರು ಸ್ವೀಕರಿಸಿತ್ತು. ನಂತರ ಯುಜಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿತು.

ಕಾಲೇಜಿನ ರ‍್ಯಾಗಿಂಗ್ ವಿರೋಧಿ ಸಮಿತಿಯು ತನಿಖೆ ನಡೆಸಿದ್ದು, ಅದರ ವರದಿಯ ಆಧಾರದ ಮೇಲೆ ಪುರಸಭೆ ಆಯುಕ್ತ ಅಭಿಜಿತ್ ಭಂಗರ್ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

Exit mobile version