3:38 PM Thursday 11 - December 2025

ಬಣಕಲ್ ಕೋಗಿಲೆ — ದೇವರ ಮನೆ ರಸ್ತೆ: ದೇವರೇ ಗತಿ ಅನ್ನುವಂತಿದೆ! | ಜನ–ಪ್ರವಾಸಿಗರ ದುಸ್ತರ ಸಂಚಾರ

devara mane road
11/12/2025

ಕೊಟ್ಟಿಗೆಹಾರ:  ಮೂಡಿಗೆರೆ ತಾಲ್ಲೂಕಿನ ಬಣಕಲ್ ಕೋಗಿಲೆ ಪ್ರದೇಶದಿಂದ ದೇವರ ಮನೆ ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಪಿಡಬ್ಲ್ಯೂಡಿ ರಸ್ತೆ ಈಗ ಸಂಪೂರ್ಣ ಹದಗೆಟ್ಟ ಸ್ಥಿತಿಗೆ ತಲುಪಿದ್ದು ಜನರು ಹಾಗೂ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಮಾರು 3 ಕಿಲೋಮೀಟರ್‌ ಉದ್ದದ ಈ ರಸ್ತೆ ಕಳೆದ ಹಲವಾರು ತಿಂಗಳಿನಿಂದ ಗುಂಡಿಯನ್ನು ಗುಂಡಿ ಹೊಡೆದು ಹಾಳಾಗಿದ್ದು, ಮಳೆಗಾಲದಲ್ಲಿ ಮತ್ತಷ್ಟು ದುರಸ್ಥಿ ಕಳೆದುಕೊಂಡಿದೆ. ಕೆಲವೆಡೆ ರಸ್ತೆ ಅಷ್ಟು ಕೆಟ್ಟ ಸ್ಥಿತಿಯಲ್ಲಿದೆ ಎಂದು ವಾಹನ ಸವಾರರು ಬೈಕ್‌–-ಕಾರುಗಳನ್ನು ತಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ದೇವರ ಮನೆ ಪ್ರವಾಸಿ ತಾಣಕ್ಕೆ ವರ್ಷಪೂರ್ತಿ ಉತ್ತಮ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಈ ರೀತಿಯ ರಸ್ತೆ ಸ್ಥಿತಿ ಸ್ಥಳೀಯರಿಗೂ, ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೂ ದೊಡ್ಡ ತೊಂದರೆ ಉಂಟುಮಾಡುತ್ತಿದೆ.

ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಕುರಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಪಿಡಬ್ಲ್ಯೂಡಿಯಿಂದ ತ್ವರಿತ ಕ್ರಮ ಕೈಗೊಂಡು ರಸ್ತೆ ದುರಸ್ತಿ ಮಾಡಿಸುವಂತೆ ಜನತೆ ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version