ಹಾಯಾಗಿ ಒಂದು ರೌಂಡ್ ಊರು ಸುತ್ತಿದ ಕರಡಿರಾಯ!

bear
27/10/2023

ಚಾಮರಾಜನಗರ: ಕರಡಿಯೊಂದು ಕಾಡು ಬಿಟ್ಟು ಊರಿಗೆ ಬಂದ ಘಟನೆ ಗುಂಡ್ಲುಪೇಟೆ ತಾಲ್ಲೂಕು ಕೋಡಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಬೆಳಗ್ಗೆ 4:30ರ ಸುಮಾರಿಗೆ ನಾಡು ಸುತ್ತಲು ಕರಡಿ ಆಗಮಿಸಿದೆ.

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಕೋಡಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ಕರಡಿ ಪ್ರತ್ಯಕ್ಷವಾಗಿದೆ. ಕೋಡಹಳ್ಳಿ ಗ್ರಾಮದಿಂದ 8 ಕಿ.ಮೀ. ದೂರದಲ್ಲಿರುವ ಚಿಕ್ಕಮ್ಮತಾಯಿ ಬೆಟ್ಟದಲ್ಲಿ ಈ ಕರಡಿ ವಾಸವಿದೆ ಅಂತ ಹೇಳಲಾಗ್ತಿದೆ.

ಕಳೆದ 15 ದಿನಗಳಿಂದ ಜಮೀನುಗಳಲ್ಲಿ ಕರಡಿ ಓಡಾಟ ಕಾಣಿಸ್ತಾ ಇದೆ.  ಇಂದು ನೇರವಾಗಿ ಒಂದು ರೌಂಡ್ ಊರು ಸುತ್ತಾಡಿ ವಾಪಸ್ ಬೆಟ್ಟದತ್ತ ಕರಡಿ ತೆರಳಿದೆ.

ಊರಿನಲ್ಲಿ ಕರಡಿ ಸಂಚರಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.  ಸದ್ಯ ಕರಡಿ ಸಂಚಾರದಿಂದಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಕರಡಿ ಊರು ಪ್ರವೇಶಿಸದಂತೆ ಮಾಡಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಅಂತ  ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version