ಇಂಟರ್ ನೆಟ್ ನಲ್ಲಿ ಹವಾ ಸೃಷ್ಟಿಸಿದ ‘ಪವರ್’ ಹಿಪ್-ಹಾಪ್ ಕನ್ನಡ ಹಾಡು: ಹೊಸ ಪ್ರಯೋಗ

power song
03/02/2026

ಬೆಂಗಳೂರು: ‘ಪವರ್’ ಎಂಬ ಅದ್ಭುತ ಹಿಪ್-ಹಾಪ್ ಸಾಂಗ್ ಇದೀಗ ಆನ್ ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರಯೋಗವನ್ನು ಕನ್ನಡದ ಪ್ರತಿಭಾನ್ವಿತ ಗಾಯಕ ಆರ್.ಡಿ. ಟಿಲ್ಲು ಮತ್ತು ಯಂಗ್ ಮಿಲ್ಲರ್ ಜೋಡಿ ಮಾಡಿದ್ದಾರೆ.

ಖ್ಯಾತ ಗಾಯಕ ಆರ್.ಡಿ. ಟಿಲ್ಲು (RD TILLU) ಮತ್ತು ಯಂಗ್ ಮಿಲ್ಲರ್ (YXUNG MILLER) ಅವರ ಕಾಂಬಿನೇಶನ್‌ ನಲ್ಲಿ ಮೂಡಿಬಂದಿರುವ ‘ಪವರ್’ (POWER) ಎಂಬ ಮ್ಯೂಸಿಕ್ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಹೊಸ ಶೈಲಿಯ ಸಂಗೀತ: ಈ ಹಾಡು ಪಕ್ಕಾ ಹಿಪ್–ಹಾಪ್ ಮತ್ತು ಇಂಡಿಪೆಂಡೆಂಟ್ ಮ್ಯೂಸಿಕ್ ಶೈಲಿಯಲ್ಲಿದ್ದು, ಯುವಜನತೆಯನ್ನು ಆಕರ್ಷಿಸುತ್ತಿದೆ. ಹಾಡಿನಲ್ಲಿ ತಮ್ಮ ಯಶಸ್ಸು ಮತ್ತು ಕಠಿಣ ಪರಿಶ್ರಮದ ವಿಷಯವನ್ನು ಎತ್ತಿಕೊಳ್ಳಲಾಗಿದೆ. ಹಾಗೆಯೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಮಾದರಿಯಾಗಿ ತೆಗೆದುಕೊಳ್ಳುತ್ತೇವೆ ಎನ್ನುವ ಸಾಲುಗಳು ಅದ್ಭುತವಾಗಿ ಮೂಡಿ ಬಂದಿದೆ.
ವಿಡಿಯೋ ವೀಕ್ಷಿಸಿ:

YouTube video player

ಸಿನಿಮ್ಯಾಟಿಕ್ ದೃಶ್ಯಗಳು: ಹಾಡಿನ ಮೇಕಿಂಗ್ ಮತ್ತು ದೃಶ್ಯಗಳು ತುಂಬಾ ಶ್ರೀಮಂತವಾಗಿ ಮೂಡಿಬಂದಿದ್ದು, ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

ಅಭಿಮಾನಿಗಳ ಮೆಚ್ಚುಗೆ: ಈ ಮ್ಯೂಸಿಕ್ ವೀಡಿಯೊ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ ಸೆಕ್ಷನ್‌ ನಲ್ಲಿ ಅಭಿಮಾನಿಗಳು ಆರ್.ಡಿ. ಟಿಲ್ಲು ಅವರ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version