65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ, ಕೊಲೆ—20 ವರ್ಷದ ಯುವಕನ ಬಂಧನ

stop rape
08/11/2026

ಬೆಂಗಳೂರು: ರಾಜಧಾನಿಯ ಕೆಂಗೇರಿಯ ಕೋನಸಂದ್ರ ಪ್ರದೇಶದಲ್ಲಿ ಅತ್ಯಂತ ದೈತ್ಯ ಹಾಗೂ ಹೇಯ ಕೃತ್ಯವೊಂದು ನಡೆದಿದ್ದು, ದೇವಸ್ಥಾನದ ಹೊರಗೆ ಮಲಗಿದ್ದ 65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ಆಭರಣ ದೋಚಿದ್ದ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಾತ್ವಿಕ್ (20) ಎಂದು ಗುರುತಿಸಲಾಗಿದೆ.

ಮೃತ ವೃದ್ಧೆ ದೇವಸ್ಥಾನದ ಆವರಣದಲ್ಲಿ ಮಲಗಿದ್ದಾಗ ಆರೋಪಿ ಸಾತ್ವಿಕ್ ಆಕೆಯ ಬಳಿಯಿದ್ದ ಹಣ ಹಾಗೂ ಚಿನ್ನದ ಉಂಗುರವನ್ನು ಕದಿಯಲು ಸಂಚು ರೂಪಿಸಿದ್ದ. ಆಭರಣ ಕಿತ್ತುಕೊಳ್ಳುವ ಯತ್ನದಲ್ಲಿ ವೃದ್ಧೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಹೊಡೆತದ ರಭಸಕ್ಕೆ ಆಕೆಯ ಪಕ್ಕೆಲುಬು (ಎದೆಯ ಮೂಳೆ) ಮುರಿದು ಹೋಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ.

ಆ ಬಳಿಕ ವೃದ್ಧೆಯ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದಾಗ, ಸ್ಥಳೀಯ ಕ್ಯಾಬ್ ಚಾಲಕನೊಬ್ಬ ಇದನ್ನು ಗಮನಿಸಿ ಪ್ರಶ್ನಿಸಿದ್ದಾನೆ. ಕೂಡಲೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದ.

ಆರಂಭದಲ್ಲಿ ಸ್ಥಳದಲ್ಲಿದ್ದ ರಕ್ತದ ಕಲೆ ಹಾಗೂ ದೇಹದ ಮೇಲೆ ಸ್ಪಷ್ಟ ಗಾಯದ ಗುರುತುಗಳು ಕಂಡುಬರದ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಘಟನೆಯನ್ನು ಕಂಡಿದ್ದ ಕ್ಯಾಬ್ ಚಾಲಕ ನೀಡಿದ ಪ್ರಮುಖ ಮಾಹಿತಿ ಹಾಗೂ ವೃದ್ಧೆಯ ಕೈಯಲ್ಲಿದ್ದ ಚಿನ್ನದ ಉಂಗುರ ನಾಪತ್ತೆಯಾಗಿದ್ದನ್ನು ಗಮನಿಸಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.

ತನಿಖೆ ನಡೆಸಿ ಆರೋಪಿ ಸಾತ್ವಿಕ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೊದಲು ಕಳವು ಮತ್ತು ಕೊಲೆ, ಬಳಿಕ ಆಕೆಯ ಮೇಲೆ ನಡೆದ ಹೇಯ ಅತ್ಯಾಚಾರದ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿ ವಿರುದ್ಧ ಈಗಾಗಲೇ ಸರಗಳ್ಳತನ ಹಾಗೂ ಗಾಂಜಾ/NDPS ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಆತನ ವಿರುದ್ಧ ಕೊಲೆ, ದರೋಡೆ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಕಠಿಣ ಕಾನೂನು ಕಾಯ್ದೆಗಳಡಿ ಪ್ರಕರಣ ದಾಖಲಿಸಿ ಕೆಂಗೇರಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version