ತುರ್ತು ಪರಿಸ್ಥಿತಿ ಒಂದು ದೊಡ್ಡ ತಪ್ಪಾಗಿತ್ತು: ಆತ್ಮಕಥೆ ಬಿಡುಗಡೆಗೂ ಮುನ್ನ ಸೋನಿಯಾ ಗಾಂಧಿ ಹೇಳಿದ್ದೇನು?

sonia gandhi
08/11/2026

ನವದೆಹಲಿ:  1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯು (ಎಮರ್ಜೆನ್ಸಿ) ಒಂದು ದೊಡ್ಡ ತಪ್ಪಾಗಿತ್ತು ಮತ್ತು ನಂತರದ ದಿನಗಳಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೂ ಈ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದರು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಕಥೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” (Belonging: A Journey of Love) ಬಿಡುಗಡೆಗೆ ಮುನ್ನ ‘ದಿ ಗಾರ್ಡಿಯನ್’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿ ಅವರನ್ನು ನಿಯಂತ್ರಣದಲ್ಲಿಟ್ಟಿದ್ದರೆ (Keeping Sanjay in check), ನಂತರ ಸಂಭವಿಸಿದ ಹೆಚ್ಚಿನ ಹಾನಿ ಮತ್ತು ಅತಿಯಾದ ನಿರ್ಬಂಧಗಳನ್ನು ತಡೆಯಬಹುದಿತ್ತು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಗಾಂಧಿ ಕುಟುಂಬದಲ್ಲೂ ಭಿನ್ನಾಭಿಪ್ರಾಯ ಮೂಡಿಸಿತ್ತು. ರಾಜೀವ್ ಗಾಂಧಿ ಅವರು ಮುಂದಿನ ಚುನಾವಣೆವರೆಗೆ ಕಾಯುವಂತೆ ತಾಯಿಗೆ ಸಲಹೆ ನೀಡಿದ್ದರು. ಆದರೆ ಸಂಜಯ್ ಗಾಂಧಿ ವಿರೋಧ ಪಕ್ಷಗಳು ನಮ್ಮನ್ನು ನಾಶಪಡಿಸುತ್ತವೆ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

“ಇಂದಿರಾ ಗಾಂಧಿ ಅವರು ಮೂಲತಃ ಪ್ರಜಾಪ್ರಭುತ್ವವಾದಿಯಾಗಿದ್ದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಅವರು ಸಹಜವಾಗಿರಲಿಲ್ಲ ಮತ್ತು ಅದು ಅವರ ಮನಸ್ಸಿನ ಮೇಲೆ ದೊಡ್ಡ ಹೊರೆಯಾಗಿತ್ತು” ಎಂದು ಸೋನಿಯಾ ಹೇಳಿದ್ದಾರೆ.

ಆ ಸಮಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು, ಸರ್ಕಾರಿ ಆಸ್ತಿಪಾಸ್ತಿಗಳ ದಹನ ಮತ್ತು ದೇಶಾದ್ಯಂತ ಉಂಟಾಗಿದ್ದ ಅಶಾಂತಿಯನ್ನು ಎದುರಿಸಲು ಇಂದಿರಾ ಗಾಂಧಿ ಹೋರಾಡುತ್ತಿದ್ದರು. ಹಾಗಾಗಿಯೇ ಅವರು ಆ ನಿರ್ಧಾರಕ್ಕೆ ಬಂದಿದ್ದರು.

ಮುಂದೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಂಡ ಇಂದಿರಾ ಗಾಂಧಿ, 1977ರಲ್ಲಿ ಹೊಸ ಚುನಾವಣೆಗಳನ್ನು ಘೋಷಿಸಿದರು ಹಾಗೂ ತುರ್ತು ಪರಿಸ್ಥಿತಿಯಲ್ಲಾದ ಅತಿಯಾದ ಕ್ರಮಗಳಿಗೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version