12:30 PM Thursday 20 - November 2025

ಮತದಾನ ಮಾಡಲು ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ: ಓರ್ವ ಮಹಿಳೆ ಸಾವು, ಮತ್ತೋರ್ವರ ಸ್ಥಿತಿ ಗಂಭೀರ

acident
11/05/2023

ಕೊಲ್ಲೂರು: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮತದಾನ ಮಾಡಲು ಹೋಗುತ್ತಿದ್ದ ಓರ್ವ ಮಹಿಳೆ ಮೃತಪಟ್ಟು, ಇನ್ನೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮೇ 10ರಂದು ಬೆಳಗ್ಗೆ 9:50ರ ಸುಮಾರಿಗೆ ಕುಳ್ಳಂಬಳ್ಳಿ ಅರೆಕಲ್ಲು ಎಂಬಲ್ಲಿ ನಡೆದಿದೆ.

ಮೃತರನ್ನು ಕೆರಾಡಿ ಗ್ರಾಮದ ಕುಳ್ಳಂಬಳ್ಳಿ ನಿವಾಸಿ ಸುಶೀಲ ಪೂಜಾರಿ(62) ಎಂದು ಗುರುತಿಸಲಾಗಿದೆ. ಇವರ ನೆರೆಮನೆಯ ನಾಗರತ್ನ ಎಂಬವರು ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ದೇವೇಂದ್ರ ಮತ್ತು ಚಾಲಕ ಕೃಷ್ಣ ಕೊಠಾರಿ ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಸುಶೀಲ ಮತ್ತು ನಾಗರತ್ನ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕೆರಾಡಿ ಗ್ರಾಪಂ ಕಟ್ಟಡದಲ್ಲಿರುವ ಮತದಾನ ಕೇಂದ್ರಕ್ಕೆ ಮತದಾನ ಮಾಡಲು ಹೆಮ್ಮಕ್ಕಿ – ಕೆರಾಡಿ ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೆಳ್ಳಾಲ ಕಡೆಯಿಂದ ಕೆರಾಡಿ ಕಡೆಗೆ ಬರುತ್ತಿದ್ದ ಕಾರು ಅತೀವೇಗದಿಂದ ನಿಯಂತ್ರಿಸಲಾಗದೇ ಹತೋಟಿ ತಪ್ಪಿರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ ಸುಶೀಲ ಮತ್ತು ನಾಗರತ್ನರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು.

ಬಳಿಕ ಕಾರು ಮರಕ್ಕೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಸುಶೀಲ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ನಾಗರತ್ನ ತೀವ್ರವಾಗಿ ಗಾಯಗೊಂಡಿದ್ದು, ದೇವೇಂದ್ರ ಮತ್ತು ಕಾರು ಚಾಲಕ ಕೃಷ್ಣ ಕೊಠಾರಿ ಸಣ್ಣಪುಟ್ಟ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version