ಚುನಾವಣೋತ್ತರ ಸಮೀಕ್ಷೆ: ಕೈ-ಕಮಲ ಇಬ್ಬರಿಗೂ ಅವಕಾಶ?!
ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದ್ದು, ಮೇ 13ರಂದು ಪ್ರಕಟವಾಗಲಿರುವ ಫಲಿತಾಂಶದ ಮೇಲೆ ಬಹುತೇಕರ ಚಿತ್ತ ನೆಟ್ಟಿದೆ.
ಮೇ 10ರ ದಂಜೆ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.
ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಬಂದಿರುವ ಸಮೀಕ್ಷೆ ಕೆಲವು ಕಾಂಗ್ರೆಸ್ ಸ್ಪಷ್ಟ ಅಧಿಕಾರ, ಕೆಲವು ಬಿಜೆಪಿ ಸ್ಪಷ್ಟ ಅಧಿಕಾರ, ಕೆಲವು ಅತಂತ್ರ ಎಂದಿವೆ. ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.
ಯಾವ ಯಾವ ಸಮೀಕ್ಷೆ ಏನು ಹೇಳಿದೆ?
ಸಿ ವೋಟರ್ :
ಬಿಜೆಪಿ- 83-95
ಕಾಂಗ್ರೆಸ್- 100-112
ಜೆಡಿಎಸ್- 21-29
ಇತರೆ- 02-06
ರಿಪಬ್ಲಿಕ್ ಎಕ್ಸಿಟ್ ಪೋಲ್ :
ಬಿಜೆಪಿ- 85-100
ಕಾಂಗ್ರೆಸ್- 94-108
ಜೆಡಿಎಸ್- 24-32
ಇತರೆ- 02-06
ಜೀ ನ್ಯೂಸ್ ಎಕ್ಸಿಟ್ ಪೋಲ್ :
ಬಿಜೆಪಿ – 79-94
ಕಾಂಗ್ರೆಸ್ – 103-118
ಜೆಡಿಎಸ್- 25-33
ಇತರೆ 02-05
ಪೋಲ್ ಸ್ಟಾರ್ :
ಕಾಂಗ್ರೆಸ್ – 99-109
ಬಿಜೆಪಿ – 88-98
ಜೆಡಿಎಸ್ – 21-26
ಇತರೆ – 00-04
ಮ್ಯಾಟ್ರಿಕ್ಸ್ :
ಕಾಂಗ್ರೆಸ್ – 103-118
ಬಿಜೆಪಿ – 79-94
ಜೆಡಿಎಸ್ – 25-33
ಇತರೆ – 02-05
P-MARQ :
ಕಾಂಗ್ರೆಸ್ – 94-108
ಬಿಜೆಪಿ – 85-100
ಜೆಡಿಎಸ್ – 23-32
ಇತರೆ – 2-6
ಜನ್ ಕಿ ಬಾತ್ :
ಕಾಂಗ್ರೆಸ್ – 91-106
ಬಿಜೆಪಿ – 94-117
ಜೆಡಿಎಸ್ – 14-24
ಇತರೆ – 00-02
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























