ಪ್ರಧಾನಿ ಮೋದಿಯ ದ್ವಂದ್ವ ಮುಖವನ್ನು ಎತ್ತಿ ತೋರಿಸಿದ ‘ಏ ಡಿಕ್ಟೇಟರ್ ಮೆಂಟಾಲಿಟಿ’: ವಿಡಿಯೋ ವೈರಲ್

20/05/2024

ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಥಿ ಅವರ ಹೊಸ ವಿಡಿಯೋ ಭಾರೀ ವೀಕ್ಷಣೆಯನ್ನು ಪಡೆಯುತ್ತಿದೆ. ಏ ಡಿಕ್ಟೇಟರ್ ಮೆಂಟಾಲಿಟಿ ಎಂಬ ಹೊಸ ವಿಡಿಯೋ ಬಿಡುಗಡೆಗೊಂಡ 17 ಗಂಟೆಗಳ ಒಳಗಡೆ 70ಲಕ್ಷ ವೀಕ್ಷಣೆಯನ್ನು ಪಡೆದು ಬಾರಿ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ವಿಮರ್ಶಿಸುವ ಈ ವಿಡಿಯೋ ಎಂದಿನಂತೆ ಮಾಹಿತಿ ಪೂರ್ಣವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಏಕಾಧಿಪತ್ಯ, ದ್ವಂದ್ವ ವ್ಯಕ್ತಿತ್ವ ಮತ್ತು ಅವಕಾಶವಾದವನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ. ತನ್ನನ್ನು ಹೊಗಳುವವರ ಜೊತೆ ನಿಲ್ಲುವ ಮತ್ತು ತನ್ನನ್ನು ಪ್ರಶ್ನಿಸುವವರನ್ನು ದೇಶದ್ರೋಹಿಯಂತೆ ಬಿಂಬಿಸುವ ಅವರ ನೀತಿಯನ್ನು ಇದರಲ್ಲಿ ಆಧಾರ ಸಮೇತ ವಿಶೇಷವಾಗಿದೆ.

1996ರಲ್ಲಿ ಮನಶಾಸ್ತ್ರಜ್ಞರಾದ ಆಶಿಶ್ ನಂದಿ ಮತ್ತು ಮೋದಿ ನಡುವಿನ ಮಾತುಕತೆಯ ಆಧಾರದಲ್ಲಿ ಈ ವಿಡಿಯೋವನ್ನು ತಯಾರಿಸಲಾಗಿದೆ. ಅವಕಾಶವಾದ ಮತ್ತು ಒಂದೇ ವಿಷಯದ ಮೇಲೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ನಿಲುವನ್ನು ಹೊಂದಿದ ಮೋದಿಯನ್ನು ಈ ವಿಡಿಯೋದಲ್ಲಿ ವಿವರಿಸಿ ತೋರಿಸಲಾಗಿದೆ. ಒಂದೇ ಸಮಯದಲ್ಲಿ ಮುಸ್ಲಿಮರನ್ನು ನಿಂದಿಸುವ ಮತ್ತು ಮುಸ್ಲಿಂ ಬಾಹುಲ್ಯ ಪ್ರದೇಶದಲ್ಲಿ ಅವರನ್ನು ಹೊಗಳುವ ಈ ದ್ವಂದ್ವ ಮುಖವನ್ನು ಈ ವಿಡಿಯೋದಲ್ಲಿ ತೆರೆದಿಡಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version