ಪ್ಲೈಓವರ್ ಕೆಳಗೆ ಸಿಲುಕಿದ ಬೃಹತ್ ಗಾತ್ರದ ಟ್ರಕ್!

24/08/2024

ಬೆಂಗಳೂರು: ಪ್ಲೈಓವರ್ ಕೆಳಗೆ ಬೃಹತ್ ಗಾತ್ರದ ಟ್ರಕ್ ವೊಂದು ಸಿಲುಕಿದ ಘಟನೆ ಬೆಂಗಳೂರಿನ ಯಶವಂತಪುರ ಫ್ಲೈ ಓವರ್   ಬಳಿಯಲ್ಲಿ ನಡೆದಿದೆ.

ಎತ್ತರದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಚಾಲಕ ಟ್ರಕ್ ಚಲಾಯಿಸಿದ ಪರಿಣಾಮ ಫ್ಲೈಓವರ್ ಕೆಳಗೆ ಟ್ರಕ್ ಸಿಲುಕಿಕೊಂಡಿದೆ.

ಟ್ರಕ್ ನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಇತರ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ಟ್ರಕ್ ಸೇತುವೆ ಕೆಳಗೆ ಸಿಲುಕಿದ ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಪ್ಲೈಓವರ್ ಗೆ ಟ್ರಕ್ ನ ಮೇಲ್ಭಾಗ ಉಜ್ಜಿಕೊಂಡು ಹೋಗಿದ್ದು, ಪರಿಣಾಮವಾಗಿ ಟ್ರಕ್ ವಾಲಿ ನಿಂತಿದೆ. ಟ್ರಕ್ ನ ಹಿಂಭಾಗದ ಚಕ್ರ ರಸ್ತೆಯಿಂದ ಮೇಲಕ್ಕೆ ಎತ್ತಿದಂತೆ ಎದ್ದು ನಿಂತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version