ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ: ಬಿಎಸ್ ಪಿಯಿಂದ ಸರ್ಕಾರಕ್ಕೆ ಒತ್ತಾಯ

mangaluru
22/11/2023

ಮಂಗಳೂರು: ಕಾಂತರಾಜ ಆಯೋಗದ ವರದಿ ಹಾಗೂ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಬಹುಜನ ಸಮಾಜ ಪಾರ್ಟಿ(BSP) ಹಮ್ಮಿಕೊಂಡಿರುವ ಧರಣಿಗೆ  ದಕ್ಷಿಣ ಕನ್ನಡ ಜಿಲ್ಲಾ  ಬಿಎಸ್ ಪಿ ಬೆಂಬಲ ಸೂಚಿಸಿದೆ.

ಬಿ.ಎಸ್.ಪಿ ರಾಜ್ಯ ಸಮಿತಿಯ ಆದೇಶದಂತೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಧರಣಿಗೆ ಬೆಂಬಲವಾಗಿ, ದ.ಕ. ಜಿಲ್ಲಾ ಬಿಎಸ್ಪಿಯ ನಿಯೋಗವು ದ.ಕ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು.

ಈ ಸಂದರ್ಭದಲ್ಲಿ ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು, ದಲಿತ್ ಸೇವಾ ಸಮಿತಿ (ರಿ) ವಿಟ್ಲ ಸ್ಥಾಪಕಧ್ಯಕ್ಷ ಸೇಸಪ್ಪ ಬೆದ್ರಕಾಡು, ಬಿಎಸ್ಪಿ ಮುಖಂಡರಾದ, ಪದ್ಮನಾಭ ಕೆ., ದೇವಪ್ಪ ಬೋದ್, ಲೋಕೇಶ್ ಮುತ್ತೂರು, ವಿಠ್ಠಲ್ ಬಜಪೆ, ರಾಕೇಶ್ ಕುಂದರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version