ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪುತ್ರ

22/11/2023
ಸುಳ್ಯ: ತನ್ನ ಹೆತ್ತ ತಂದೆ, ತಾಯಿಯ ಮೇಲೆಯೇ ಕತ್ತಿಯಿಂದ ಮಗ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲಗದ್ದೆಯಲ್ಲಿ ನಡೆದಿದೆ.
ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿಗಳಾದ ಮಂಜುನಾಥ್ ಆಚಾರ್ ಹಾಗೂ ಅವರ ಪತ್ನಿ ಧರ್ಮಾವತಿ ಆಚಾರ್ ಗಾಯಗೊಂಡ ದಂಪತಿಯಾಗಿದ್ದಾರೆ. ಮಗನ ಹಲ್ಲೆಯಿಂದಾಗಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತಂದೆ-ತಾಯಿಯ ಮೇಲೆ ಹಲ್ಲೆ ನಡೆಸಿದ ಮಗ ದೇವಿಪ್ರಸಾದ್ ನನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ದೇವಿ ಪ್ರಸಾದ್ ತನ್ನ ತಂದೆ ತಾಯಿಯ ಮೇಲೆಯೇ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.