ಶಾಲಾ ಮಕ್ಕಳು, ಜನರು ಓಡಾಡುವ ದಾರಿಯಲ್ಲೇ ಸಂಚಾರ ಆರಂಭಿಸಿದ ಕಾಡಾನೆ!
ಚಿಕ್ಕಮಗಳೂರು: ಶೃಂಗೇರಿಯ ಕೆರೆಕಟ್ಟೆಯಲ್ಲಿ ಮತ್ತೆ ಕಾಡಾನೆ ಭೀತಿ ಎದುರಾಗಿದೆ. ಒಂದು ಕಾಡಾನೆ ಸೆರೆಯಾಗ್ತಿದ್ದಂತೆ ಮತ್ತೊಂದು ಕಾಡಾನೆ ಈ ಭಾಗದಲ್ಲಿ ಸಂಚಾರ ಆರಂಭಿಸಿದೆ.
ವಾರದ ಹಿಂದೆ ಕೆರೆಕಟ್ಟೆಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದೀಗ ಅದೇ ಕೆರೆಕಟ್ಟೆ ಸುತ್ತಮುತ್ತ ಮತ್ತೊಂದು ಒಂಟಿ ಸಲಗ ಸಂಚಾರ ಆರಂಭಿಸಿದೆ. ಹೀಗಾಗಿ ಶೃಂಗೇರಿಯ ಕೆರೆಕಟ್ಟೆ, ಹುಲುಗಾರು ಬೈಲ್ ಭಾಗದಲ್ಲಿ ಮತ್ತೆ ಕಾಡಾನೆ ಭೀತಿ ಎದುರಾಗಿದೆ.
ಹುಲುಗಾರು ಬೈಲಿನಲ್ಲಿ ಬೈನೆ ಮರವನ್ನ ಕಾಡಾನೆ ಧ್ವಂಸ ಮಾಡಿ ಹಾಕಿದೆ. ಬೈನೆ ಮರವನ್ನು ಆನೆ ಉರುಳಿಸಿದ ವೇಳೆ ಮರ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದು ಬಿದ್ದಿದೆ. ಹೀಗಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದೇ ಜಾಗದಲ್ಲೇ ನಿತ್ಯ ಮಕ್ಕಳು ಜನರು ಓಡಾಡುತ್ತಾರೆ. ಇದೀಗ ಇದೇ ಪ್ರದೇಶದಲ್ಲಿ ಕಾಡಾನೆ ಸಂಚಾರ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹುಲುಗಾರು ಬೈಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























