ಸತ್ತು ಹೋದ ಮರಿಯೊಂದಿಗೆ ಅಲೆದಾಡುತಿರುವ ತಾಯಿ ಆನೆ!

beluru
17/06/2025

ಹಾಸನ: ಮರಿ ಆನೆ ಮೃತಪಟ್ಟು ಮೂರು ದಿನಗಳಾದರೂ ತಾಯಿ ಆನೆ ಮರಿಯ ಕಳೆಬರಹವನ್ನು ತಾನು ಹೋದ ಕಡೆಯಲ್ಲೆಲ್ಲ, ಹೊತ್ತುಕೊಂಡು ತಿರುಗಾಡುತ್ತಿರುವ ಹೃದಯ ವಿದ್ರಾವಕ ದೃಶ್ಯ  ಹಾಸನದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕನನಳ್ಳಿ ಎಸ್ಟೇಟ್ ಬಳಿ ಕಂಡು ಬಂತು.

ಈ ಘಟನೆಯ  ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಮರಿ ಸತ್ತು ಹೋಗಿದೆ ಎನ್ನುವುದು ತಿಳಿಯದೇ ಆನೆ ತಾನು ಹೋದಲ್ಲೆಲ್ಲ ಹೊತ್ತುಕೊಂಡು ಹೋಗುತ್ತಿದೆ. ಅಲ್ಲದೇ ಕಾಲಿನಿಂದ ಒದ್ದು ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಹೃದಯ  ಹಿಂಡುವಂತಿದೆ.

ಶನಿವಾರ ಈ ಗರ್ಭಿಣಿ ಆನೆ  ಮರಿಗೆ ಜನ್ಮ ನೀಡಿದೆ. ಆದರೆ ಮರಿ ಹುಟ್ಟುವ ಮೊದಲೇ ಸಾವನ್ನಪ್ಪಿತ್ತು ಎನ್ನಲಾಗಿದೆ. ಮರಿ ಸತ್ತಿದ್ದರೂ ತಾಯಿ ಆನೆ ಮರಿಯನ್ನು ಎಳೆದುಕೊಂಡು ತನ್ನೊಂದಿಗೆ ಸಾಗುತ್ತಿದೆ.

ಮರಿ ಬದುಕಿದೆ ಎಂದು ನಂಬಿ ತಾಯಿ ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿದೆ ಎಂದು ಹೇಳಲಾಗಿದೆ. ತಾಯಿ ಆನೆಯ ಭಾವನಾತ್ಮಕ ಸಂದರ್ಭವನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version