ಎಣ್ಣೆ ಹೊಡೆಯಲು ಹೋಗಿ ಬರುವಷ್ಟರಲ್ಲಿ ಬೈಕ್ ನೊಳಗೆ ಸೇರಿದ ಹಾವು: ಬೈಕ್ ಸವಾರನ ಪರದಾಟ

ಚಿಕ್ಕಮಗಳೂರು: ರಸ್ತೆ ಬದಿ ಬೈಕ್ ನಿಲ್ಲಿಸಿ ಎಣ್ಣೆ ಹೊಡೆಯಲು ಹೋಗಿದ್ದ ದ್ವಿಚಕ್ರ ವಾಹನ ಸವಾರನಿಗೆ ನಾಗರ ಹಾವೊಂದು ಶಾಕ್ ನೀಡಿದೆ. ಎಣ್ಣೆ ಹೊಡೆದು ಬರುವಷ್ಟರಲ್ಲಿ ನಾಗರ ಹಾವು ಸ್ಕೂಟಿಯೊಳಗೆ ಸೇರಿಕೊಂಡಿದೆ.
ಬೈಕ್ ಹತ್ತುವಾಗ ಹಾವಿನ ಬಾಲ ನೋಡಿ ಭಯಗೊಂಡಿದ್ದ ಬೈಕ್ ಸವಾರನ ನಶೆ ಇಳಿದಿದೆ. ಎಣ್ಣೆ ಏಟಲ್ಲೇ ಹಾವನ್ನು ಹೊರ ತೆಗೆಯಲು ಬೈಕ್ ಸವಾರ ಪರದಾಟ ನಡೆಸಿದ್ದಾನೆ.
ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಎಂಬವರಿಗೆ ಸೇರಿದ ಸ್ಕೂಟಿಯೊಳಗೆ ಹಾವು ನುಗ್ಗಿತ್ತು. ಕೊನೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಸ್ನೇಕ್ ಆರೀಫ್ ಅವರು ಬೈಕ್ ಸವಾರನ ಪರದಾಟ ಕಂಡು ಹಾವನ್ನು ಸೆರೆ ಹಿಡಿದಿದ್ದಾರೆ
10 ನಿಮಿಷಗಳ ಕಾಲ ಬೈಕಿನ ಮುಂಭಾಗ ಬಿಚ್ಚಿ ಹಾವನ್ನು ಸೆರೆ ಹಿಡಿಯಲಾಯ್ತು ಸೆರೆ ಹಿಡಿದ ಹಾವನ್ನ ಚಾರ್ಮಾಡಿ ಅರಣ್ಯ ಸ್ನೇಕ್ ಆರೀಫ್ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD