2:45 AM Saturday 18 - October 2025

ಪ್ರೇಯಸಿ ಜೊತೆಗೆ ಲಾಡ್ಜ್ ನಲ್ಲಿ ತಂಗಿದ್ದ ಯುವಕ ಸಾವು!

thakshith
18/10/2025

ಬೆಂಗಳೂರು: ಪ್ರೇಯಸಿ ಜೊತೆಗೆ ಲಾಡ್ಜ್ ನಲ್ಲಿ ತಂಗಿದ್ದ ಪ್ರಿಯಕರ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್​ ನಲ್ಲಿ ನಡೆದಿದೆ.

ವರದಿಗಳ ಪ್ರಕಾರ ಮೃತಪಟ್ಟ ಯುವಕ ಪುತ್ತೂರು ಮೂಲದವನಾಗಿದ್ದು, ತಕ್ಷಿತ್(20) ಎಂದು ಗುರುತಿಸಲಾಗಿದೆ. ಈತ ಪ್ರೇಯಸಿ ಜೊತೆಗೆ ಕಳೆದ 8 ದಿನಗಳಿಂದ ಲಾಡ್ಜ್ ನಲ್ಲಿ ವಾಸವಿದ್ದ ಎಂದು ಹೇಳಲಾಗಿದೆ. ನಿನ್ನೆ (ಅ.17) ಲಾಡ್ಜ್​ ನ ರೂಮಿನಲ್ಲಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ.

ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆಗೆ ತಕ್ಷಿತ್ ಲಾಡ್ಜ್ ಬುಕ್ ಮಾಡಿಕೊಂಡಿದ್ದ. ಯುವಕ ಸಾವನ್ನಪ್ಪುವುದಕ್ಕೂ ಮುನ್ನ ಯುವತಿ ಲಾಡ್ಜ್ ನಿಂದ ಹೊರ ಹೋಗಿದ್ದಳು ಎಂದು ತಿಳಿದು ಬಂದಿದೆ.

ರೂಮ್ ನಲ್ಲಿದ್ದ ವೇಳೆ ಸ್ವಿಗ್ಗಿಯಿಂದ ಊಟ ತರಿಸಿಕೊಂಡು ಊಟ ಮಾಡಿದ್ದರು. ನಂತರ ಇಬ್ಬರಿಗೂ ಫುಡ್ ಪಾಯ್ಸನ್ ಆಗಿತ್ತು. ಹೀಗಾಗಿ ಮಾತ್ರ ಕೂಡ ಸೇವಿಸಿದ್ದರು ಎನ್ನಲಾಗಿದೆ. ರಕ್ಷಿತಾ ತಾನು ಸುಧಾರಿಸಿಕೊಂಡ ನಂತರ ಲಾಡ್ಜ್ ನಿಂದ ಹೊರ ಹೋಗಿದ್ದಾಳೆ. ರೂಮ್ ನಲ್ಲಿದ್ದ ತಕ್ಷಿತ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಯುಡಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರ ನಿಜಾಂಶ ಬಯಲಾಗ ಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version