ಹೊಸ ಗಡುವು: ಆಧಾರ್-ಪಡಿತರ ಚೀಟಿ ಲಿಂಕ್ ಮಾಡುವ ದಿನಾಂಕ ಇನ್ನೂ 3 ತಿಂಗಳು ವಿಸ್ತರಣೆ

ಪಡಿತರ ಚೀಟಿದಾರರಿಗೆ ಹೆಚ್ಚು ಅಗತ್ಯವಾದ ಪರಿಹಾರವನ್ನು ತರುವ ಮೂಲಕ ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡುವ ಗಡುವನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ. ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡಲು ಹೊಸ ಗಡುವು 30 ಸೆಪ್ಟೆಂಬರ್ 2024 ಆಗಿದೆ. ಈ ಹಿಂದೆ ಜೂನ್ 30 ಕೊನೆಯ ದಿನಾಂಕವಾಗಿತ್ತು. ಈ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಸೆಪ್ಟೆಂಬರ್ 30, 2024 ರೊಳಗೆ ಆಧಾರ್-ಪಡಿತರ ಚೀಟಿ ಲಿಂಕ್ ಅನ್ನು ಪೂರ್ಣಗೊಳಿಸಲು ನಿಮಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ.
ಮೂಲ ಪಡಿತರ ಚೀಟಿಯ ಫೋಟೋಕಾಪಿ
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ
ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಫೋಟೋಕಾಪಿ
ಬ್ಯಾಂಕ್ ಪಾಸ್ ಬುಕ್ ನ ಫೋಟೋಕಾಪಿ
ಕುಟುಂಬದ ಮುಖ್ಯಸ್ಥರ ಎರಡು ಪಾಸ್ ಪೋರ್ಟ್ ಗಾತ್ರದ ಫೋಟೋ ಬೇಕಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth