ಇವಿಎಂ ಮಷೀನ್ ನಲ್ಲಿನ ನಿಮ್ಮ ಭವಿಷ್ಯದ ಬಟನ್ನೇ ಆಮ್ ಆದ್ಮಿ ಪಕ್ಷದ ಬಟನ್ – ಪೃಥ್ವಿ ರೆಡ್ಡಿ
ಆಮ್ ಆದ್ಮಿ ಪಕ್ಷದ ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಣಾಳಿಕೆಯನ್ನು ಇಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಪ್ರಣಾಳಿಕಾ ಸಮಿತಿಯ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಬಿಡುಗಡೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ, ರಾಜ್ಯದಾದ್ಯಂತ ಸಾವಿರಾರು ಜನರ ಭೇಟಿ ಮಾಡಿ,ಅಭಿಪ್ರಾಯವನ್ನು ಪಡೆದುಕೊಂಡು ಈ ಪ್ರಣಾಳಿಕೆಯನ್ನು ರಚಿಸಿರುವ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು ಸಲ್ಲಿಸಿದರು.
” ಈ ಹಿಂದೆ ನಾವು ನೀಡಿದಂತಹ ಅನೇಕ ಭರವಸೆಗಳನ್ನು ಅನೇಕ ಪಕ್ಷಗಳು ಗೇಲಿ ಮಾಡುತ್ತಿದ್ದವು. ಈಗ ಅದೇ ಪಕ್ಷಗಳು ಕ್ಯೂನಲ್ಲಿ ನಿಂತು ನಾವು ನೀಡಿದ ಭರವಸೆಗಳನ್ನೇ ನಕಲು ಮಾಡುತ್ತಾ ಜನರಲ್ಲಿ ಗ್ಯಾರೆಂಟಿ ನೀಡುತ್ತಿದ್ದಾರೆ. ಇದರಿಂದಾಗಿ ನಮಗೇನು ಬೇಸರವಿಲ್ಲ. ಕೊನೆಗಾದರೂ ಎಲ್ಲ ಪಕ್ಷಗಳು ನಮ್ಮ ಹಾದಿಯಲ್ಲೇ ಬರುತ್ತಿದ್ದಾರೆ ಎಂಬ ಸಂತೋಷವಂತು ಆಗುತ್ತಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
” ನಾಯಿ ಬಾಲ ಡೊಂಕು ಎಂಬಂತೆ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಮತ್ತೆ ಸಂಘಟನೆಗಳ ಬ್ಯಾನ್ ನೆಪದಲ್ಲಿ ಜಾತಿ- ಧರ್ಮಗಳ ಸಂಘರ್ಷದ ದೃವೀಕರಣ ರಾಜಕಾರಣ ಕೇಳಿದಿರುವುದು ನಿಜಕ್ಕೂ ನಾಚಿಕೆಗೇಡು. ನಿಜಕ್ಕೂ ಬ್ಯಾನ್ ಆಗಬೇಕಿರೋದು ಅವ್ಯಾಹತ ಅಕ್ರಮ, ಅನ್ಯಾಯ,ಭ್ರಷ್ಟಾಚಾರ ದಲ್ಲಿ ಮುಳುಗಿರುವ ಈ ಮೂರು ಜೆಸಿಬಿ ಪಕ್ಷಗಳು ” ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಪ್ರಣಾಳಿಕೆಯಲ್ಲಿ ಚಾಮರಾಜನಗರದಿಂದ ಬೀದರ್ ತನಕ ಕೂಲಿ ಕೆಲಸವನ್ನರಸಿ ಅಥವಾ ಐಟಿಬಿಟಿ ಕೆಲಸವನ್ನು ಅರಸಿ ಬೆಂಗಳೂರಿಗೆ ಅಲೆಯಬೇಕಾದಂತಹ ಕೆಟ್ಟ ಪರಿಸ್ಥಿತಿಯನ್ನು ಬದಲಾಯಿಸುವುದೇ ನಮ್ಮ ಗುರಿ. ಯಾವ್ಯಾವ ಜಿಲ್ಲೆಗಳಿಗೆ ಯಾವ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂಬ ಜಿಲ್ಲಾ ವಾರು ವಿವರಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ತೋರಿಸಿದ್ದೇವೆ.
ಸಮಗ್ರವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳು ಸರ್ವಾಂಗಿನ ಅಭಿವೃದ್ಧಿ ಹೊಂದಬೇಕೆಂಬುದೇ ನಮ್ಮ ಗುರಿ. ಮೂರು ಜೆಸಿಬಿ ಪಕ್ಷಗಳ ಸದಾ ಯುವಕರು ಮಹಿಳೆಯರು, ರೈತರು, ಕೂಲಿಕಾರ್ಮಿಕರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಆದರೆ ಈ ವರ್ಗಗಳ ಪ್ರತಿನಿಧಿಸುವ ಯಾರಿಗೂ ಸಹ ಟಿಕೆಟ್ ನೀಡುವ ತಾಕತ್ತು ಇವರ್ಯಾರಿಗೂ ಇಲ್ಲ” ಎಂದು ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡುತ್ತಾ ” ಪ್ರಪ್ರಥಮ ಬಾರಿಗೆ ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಈಗಲೂ ಉಳುಮೆ ಮಾಡುತ್ತಿರುವ 27 ಮಂದಿ ರೈತರಿಗೆ, 18 ಮಹಿಳೆಯರಿಗೆ, ಮಾಜಿ ಕಂಡಕ್ಟರ್ ಆಟೋ ಡ್ರೈವರ್ ಗಳಿಗೆ ನಾವು ಟಿಕೆಟ್ ಅನ್ನು ನೀಡಿದ್ದೇವೆ. ಮತ್ತು ಟಿಕೆಟ್ ಗಳನ್ನು 30 ವಯಸ್ಸಿನ ಒಳಗಿನ ಯುವಕರಿಗೆ ಹಾಗೂ 45 ವರ್ಷ ಒಳಗಿನ 90 ಮಂದಿಗೆ ಟಿಕಟ್ಟನ್ನು ನೀಡಿದ್ದೇವೆ. ಬೇರೆ ಪಕ್ಷಗಳ ರೀತಿ ನಾವು ಯಾವುದೇ ಜಾತಿ ಧರ್ಮದ ಲೆಕ್ಕಾಚಾರವನ್ನು ಹಾಕಿಲ್ಲ”
ಈ ಪ್ರಣಾಳಿಕೆ ಬಿಡುಗಡೆಯ ನಂತರ ಕರ್ನಾಟಕ ರಾಜ್ಯದ ಭವಿಷ್ಯವನ್ನು ಬದಲಿಸುವ ಅವಕಾಶವನ್ನು ಪಕ್ಷವು ರಾಜ್ಯದ ಮತದಾರರುಗಳಿಗೆ ಈ ಮೂಲಕ ನೀಡುತ್ತಿದ್ದೇವೆ. ಮತದಾನದ ದಿನ ಮೇ 10ನೇ ತಾರೀಖಿನಂದು ನಿಮ್ಮ ಇವಿಎಂ ಮಷೀನ್ ನಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಬಟನ್ ಇರುತ್ತದೆ. ಆ ಭವಿಷ್ಯದ ಬಟನ್ ಆಮ್ ಆದ್ಮಿ ಪಕ್ಷದ ಬಟನ್, ಮತವನ್ನು ನೀಡಬೇಕೆಂದು ” ಪೃಥ್ವಿ ರೆಡ್ಡಿ ಮತದಾರರಿಗೆ ಕರೆ ನೀಡಿದರು .
ಪ್ರಣಾಳಿಕ ಸಮಿತಿಯ ಅಧ್ಯಕ್ಷರಾದ ಅಶ್ವಿನ್ ಮಹೇಶ್ ಮಾತನಾಡುತ್ತಾ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡದೆ ಯಾವುದೇ ರೀತಿಯ ರಾಜ್ಯದ ಸರ್ವಾಂಗಿನ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ವಕ್ತಾರೆ ಉಷಾ ಮೋಹನ್ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























