ನೀವು ಎಲ್ಲಿ ಕೂತಿದ್ದೀರಿ ಅಲ್ಲೇ ಹಕ್ಕುಪತ್ರ: ವಿನಯ ಕುಮಾರ್ ಸೊರಕೆ
ಪೆರ್ಡೂರು: ಸರ್ಕಾರಿ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಮನೆ ಮಾಡಿ ಕೂತವರಿಗೆ ನೀವು ಎಲ್ಲಿ ಕೂತಿದ್ದೀರಿ ಅದೇ ಜಾಗಕ್ಕೆ ಹಕ್ಕುಪತ್ರ ಒದಗಿಸುವ ಕಾರ್ಯವನ್ನು ಕಾನೂನಿನಂತೆ ಮಾಡಿಕೊಡಲಾಗುವುದು ಅಂತಾ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಪೆರ್ಡೂರು ಬುಕ್ಕಿಗುಡ್ಡೆಯ ಕೈರ್ ಎಂಬಲ್ಲಿ ಮನೆ ಮನೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಜಾಗದಲ್ಲಿ ಕೂತ ಬಡವರನ್ನು ಎಬ್ಬಿಸಿ ಬುಲ್ಡೋಜರ್ ಓಡಿಸಿ ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ.ಕಳೆದ 5 ವರ್ಷದ ಬಿಜೆಪಿ ಸಾಧನೆಗಳಲ್ಲಿ ಇದು ಕೂಡಾ ಒಂದು. ಕಾಂಗ್ರೆಸ್ ಇಂದಿರಾಗಾಂಧಿ ಕಾಲದಿಂದಲೂ ಡಿಕ್ಲರೇಷನ್ ಕಾನೂನು ಮೂಲಕ ಭೂಮಿ ನೀಡುವ ಮಹತ್ ಕಾರ್ಯವನ್ನು ಮಾಡಿಕೊಂಡು ಬಂದಿದೆ.
ಮುಂದೂ ಕೂಡಾ ಬಡವರು ಸರ್ಕಾರಿ ಜಾಗದಲ್ಲಿ ಕೂತಲ್ಲಿ ಕೂತ ಸ್ಥಳದಲ್ಲೇ ಹಕ್ಕು ಪತ್ರ ನೀಡುವ ಕೆಲಸವನ್ನು ಮಾಡಲಾಗುವುದು ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಬಡವರ ಪಕ್ಷ ಕಾಂಗ್ರೆಸ್ ನ್ನು ಗೆಲ್ಲಿಸಿದರೆ ಹಕ್ಕುಪತ್ರ ಕೊಡುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗುವುದು ಅಂತಾ ಅವರು ಹೇಳಿದರು.
ನಂತರ ಪೆರ್ಡೂರು ವ್ಯಾಪ್ತಿಯ ಹತ್ರಿಬೈಲು ವಿಜಯಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮತ್ತು ಬುಕ್ಕಿಗುಡ್ಡೆಯಲ್ಲಿ ಎಪಿಎಂ ಕ್ಯಾಶ್ಯೂ ಇಂಡಸ್ಟ್ರೀಸ್ ಗೆ ಭೇಟಿ ಅಲ್ಲಿನ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಮತಯಾಚನೆ ಮಾಡಿದರು.
ಪೆರ್ಡೂರು ಬುಕ್ಕಿಗುಡ್ಡೆ ಕೈರ್ ವ್ಯಾಪ್ತಿಯಸಂತೋಷ್ ಕುಲಾಲ್, ದಿನೇಶ್ ಪೂಜಾರಿ, ಶೋಭಾ, ರಾಮದಾಸ್, ಹರೀಶ್, ರಾಮ ಕುಲಾಲ್, ರಘುನಾಥ್ ನಾಯ್ಕ್, ಸುಂದರ, ರಾಘವೆ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























