ಹೋಳಿ ಆಚರಣೆಯ ನಂತರ ಹಲವರಲ್ಲಿ ಚರ್ಮ, ಕಣ್ಣಿನ ಸಮಸ್ಯೆ ಪತ್ತೆ!: ಬಣ್ಣಗಳ ಬಗ್ಗೆ ಎಚ್ಚರವಿರಲಿ

holi
28/03/2024

ಬೆಂಗಳೂರು: ನಗರದಲ್ಲಿ ಹೋಳಿ ಆಚರಣೆಯ ನಂತರ ಹಲವರು ಚರ್ಮ ಹಾಗೂ ಕಣ್ಣಿನ ಸಮಸ್ಯೆಯಿಂದ ಬಳಲಿದ ಪ್ರಕರಣಗಳು ನಡೆದಿದ್ದು, ಸಾಕಷ್ಟು ಜನರು ತುರಿಕೆ, ಕಣ್ಣು ಕೆಂಪಗಾಗುವಂತಹ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ಬಂದಿರುವುದಾಗಿ ವರದಿಯಾಗಿದೆ.

ಹೋಳಿ ಆಚರಣೆ ವೇಳೆ ಕಣ್ಣಿಗೆ ಬಣ್ಣ ಹೋಗಿ ಕೆಲವರಿಗೆ ಕಣ್ಣಿನ ಸಮಸ್ಯೆಗಳು ಉಂಟಾಗಿದ್ದು, ನಾಲ್ವರು ನಮ್ಮ ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ನೇತ್ರ ತಜ್ಞ ಡಾ.ರಾಜಶೇಖರ್ ವೈ.ಎಲ್. ಹೇಳಿರುವ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಹೋಳಿ ಬಣ್ಣಗಳು ರಾಸಾಯನಿಕಗಳಿಂದ ಕೂಡಿದ್ದು, ಇದರಿಂದ ಚರ್ಮ ಹಾಗೂ ಕಣ್ಣಿನಂತಹ ಸೂಕ್ಷ್ಮ ಭಾಗಗಳಿಗೆ ಬಹು ಬೇಗನೇ ಹಾನಿಯಾಗಬಹುದು. ಇಂತಹ ಬಣ್ಣಗಳನ್ನು ಮೈ ಮೇಲೆ ಹಚ್ಚಿಕೊಳ್ಳುವುದು ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನೂ ಹೋಳಿಯ ಬಣ್ಣ ಬಳಸಿದ ಪರಿಣಾಮ ವ್ಯಕ್ತಿಯೊಬ್ಬರ ಕೈಗಳಲ್ಲಿ  ಕೆಂಪು ಬಣ್ಣದ ಗುಳ್ಳೆಗಳು ಎದ್ದಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಹೋಳಿಗೆ ಬಳಸುವ ಬಣ್ಣಗಳಿಂದ ಜನರು ಅನಾರೋಗ್ಯಕ್ಕೀಡಾಗುತ್ತಿರುವುದು ಕಂಡು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version