3:42 PM Wednesday 15 - October 2025

ಹೊಟ್ಟೆನೋವು, ವಾಂತಿ, ಭೇದಿಯಿಂದ ಅಗ್ರಹಾರ ನಿವಾಸಿಗಳು ಕಂಗಾಲು | ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಅನುಮಾನ

5 rupee water
03/08/2021

ಮೈಸೂರು:  ಇಲ್ಲಿನ ಅಗ್ರಹಾರ ವಾರ್ಡ್‌ 51ರಲ್ಲಿ ಕಳೆದ 10 ದಿನಗಳಿಂದಲೂ ಹೊಟ್ಟೆನೋವು, ವಾಂತಿ, ಭೇದಿ ಪ್ರಕರಣಗಳು ಹೆಚ್ಚುತ್ತಿದ್ದು, ಇಲ್ಲಿಗೆ ಸರಬರಾಜಾಗುತ್ತಿರುವ ನೀರಿನಿಂದಾಗಿ ಸಮಸ್ಯೆ ಉದ್ಬವವಾಗಿದೆ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿವೆ.

 ಈ ವಾರ್ಡಿನಿಂದ ಕುಡಿಯುವ ನೀರಿನ 24 ಮಾದರಿಗಳನ್ನು ಇಲ್ಲಿನ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದಲ್ಲಿರುವ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನೀರನ್ನು ಕ್ಲೋರಿನ್‌ ಮೂಲಕ ಸ್ವಚ್ಛಗೊಳಿಸಿದರೂ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ತಿಳಿದು ಬಂದಿದೆ.

ಕುಡಿಯುವ ನೀರನ್ನು ಹಿಂದಿನಂತೆಯೇ ಶುದ್ಧೀಕರಿಸಿ ನೀಡಲಾಗುತ್ತಿದೆ. ಮಳೆ ಬಂದಿರುವುದರಿಂದ ಹೊಸ ನೀರು ಬರುತ್ತಿದೆ. ನಿವಾಸಿಗಳು ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದು ಪಾಲಿಕೆ ಈಗಾಗಲೇ ತಿಳಿಸಿದೆ ಎನ್ನಲಾಗಿದೆ.

ಇನ್ನೂ ಈ ಪ್ರದೇಶದಲ್ಲ 5 ರೂಪಾಯಿಯ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕುಡಿಯಲು ಜನರು ಬಳಸುತ್ತಿದ್ದಾರೆ. ಈ ನೀರು ನಿಜವಾಗಿಯೂ ಶುದ್ಧವಾಗಿರುತ್ತದೆಯೇ? ಇದರಿಂದಲೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್

ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ | ಯುವಕ ಅರೆಸ್ಟ್

ಭಾರತದ ವಿದ್ಯಾರ್ಥಿ ಚೀನಾದಲ್ಲಿ ನಿಗೂಢ ಸಾವು | ಸಾವಿಗೆ ಕಾರಣವೇನು?

200 ರೂಪಾಯಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾದ ಬೈಕ್ ಸವಾರರು!

ಇತ್ತೀಚಿನ ಸುದ್ದಿ

Exit mobile version