6:05 AM Thursday 16 - October 2025

ಆಹಾರದಲ್ಲಿ ವಿಷ ಬೆರೆಸಿ ತಂದೆ, ಅಣ್ಣ, ತಂಗಿಯನ್ನು ಕೊಂದ 15 ವರ್ಷದ ಬಾಲಕಿ

poison
12/08/2021

ಪ್ರಯಾಗ್ ರಾಜ್: ತನ್ನನ್ನು ನಿರಂತರವಾಗಿ ನಿಂದಿಸಿ, ಬೈಯ್ಯುತ್ತಿದ್ದ ಕುಟುಂಬದ ಮೂವರು ಸದಸ್ಯರನ್ನು ಬಾಲಕಿಯೋರ್ವಳು ಆಹಾರದಲ್ಲಿ ವಿಷ ಸೇರಿಸಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಬಾಲಕಿಯನ್ನು ಅರೆಸ್ಟ್ ಮಾಡಲಾಗಿದೆ.

ಪ್ರಯಾಗ್ ರಾಜ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕಳೆನಾಶಕವನ್ನು ಆಹಾರದಲ್ಲಿ ಬಾಲಕಿ ಬೆರೆಸಿದ್ದು ಪರಿಣಾಮವಾಗಿ ಬಾಲಕಿಯ ತಂದೆ, ಕಿರಿಯ ಸಹೋದರಿ, ಹಿರಿಯ ಸಹೋದರ ಸಾವನ್ನಪ್ಪಿದ್ದಾರೆ.  ಮನೆ ಕೆಲಸಕ್ಕೆ ಸಂಬಂಧಿಸಿದಂತೆ ಇವರು ಗದರಿಸಿ ಬೈಯ್ಯುತ್ತಿದ್ದರು ಎನ್ನಲಾಗಿದೆ. ಈ ವಿಚಾರವನ್ನು 15ರ ಬಾಲಕಿ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಆಹಾರಕ್ಕೆ ವಿಷ ಬೆರೆಸಿದ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ. ಆ.4 ಹಾಗೂ 8 ರಂದು ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ. ಕುಟುಂಬದ ಅಪ್ರಾಪ್ತ ಬಾಲಕಿ ತನ್ನವರನ್ನೇ ಹತ್ಯೆ ಮಾಡುವುದಕ್ಕೆ ಯೋಜನೆ ರೂಪಿಸಿದ್ದಳು ಎಂದು ಡೆಪ್ಯುಟಿ ಎಸ್ ಪಿ (ಸೊರಾನ್) ಅಮಿತಾ ಸಿಂಗ್ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಒಂದು ಬಾರಿ ಅವನು ನನ್ನ ಜೊತೆಗೆ ಲಿಮಿಟ್ ಮೀರಿ ವರ್ತಿಸಿದ್ದ: ಕಹಿ ನೆನಪು ಹಂಚಿಕೊಂಡ ಶಮಿತಾ ಶೆಟ್ಟಿ

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ಪೊಲೀಸರ ನಡುವೆಯೇ ಘರ್ಷಣೆ: ಹೆಡ್ ಕಾನ್ಸ್ ಟೇಬಲ್ ಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಕಾನ್ಸ್ ಟೇಬಲ್

ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಯಾರು? | ತಡ ರಾತ್ರಿ ನಡೆದ್ದದ್ದೇನು?

ಪ್ರೇಮ ನಿವೇದನೆ ತಿರಸ್ಕರಿಸಿದ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಹುಷಾರ್: ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ

ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!

ಇತ್ತೀಚಿನ ಸುದ್ದಿ

Exit mobile version