ಖಾಲಿಯಿದೆ 4 ಸಾವಿರ ನರ್ಸಿಂಗ್ ಆಫೀಸರ್ ಹುದ್ದೆ: ಯಾರೆಲ್ಲ ಅರ್ಜಿ ಹಾಕಬಹುದು?

nursing
05/08/2024

ದೇಶಾದ್ಯಂತ ಇರುವ ಎಲ್ಲಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ (AIIMS) ಖಾಲಿ ಇರುವಂತಹ ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ದೆಹಲಿ ಏಮ್ಸ್ ಅಧಿಸೂಚನೆ ಹೊರಡಿಸಿದೆ.

ಈ ಬಾರಿಯ ನೇಮಕಾತಿಯಲ್ಲಿ ಒಟ್ಟು 3,500 ರಿಂದ 4,000 ಹುದ್ದೆಗಳು ಖಾಲಿ ಇದ್ದು, ಬಿ ಎಸ್ ಸಿ ನರ್ಸಿಂಗ್ ಮುಗಿಸಿದವರಿಗೆ ಹಾಗೂ ಡಿಪ್ಲೋಮಾ ನರ್ಸಿಂಗ್ ಮುಗಿಸಿದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಹುದ್ದೆಗಳಲ್ಲಿ ಒಟ್ಟು 80% ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು ಉಳಿದ 20% ಹುದ್ದೆಗಳನ್ನು ಪುರುಷರಿಗಾಗಿ ಮೀಸಲಿಡಲಾಗಿದೆ.

AIIMS Nursing Officer Recruitment 2024 : ಏಮ್ಸ್ ನವದೆಹಲಿ, ಏಮ್ಸ್ ಗೊರಕ್ ಪುರ್ ಸೇರಿದಂತೆ ದೇಶದ ಒಟ್ಟು 14 ಏಮ್ಸ್ ಮೆಡಿಕಲ್ ಕಾಲೇಜುಗಳಲ್ಲಿ ಈ ಒಂದು ಉದ್ಯೋಗಾವಕಾಶ ಲಭ್ಯವಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಬಯಸುವಂತಹ ಅಭ್ಯರ್ಥಿಗಳು ಕೆಳಗಿನ ಲೇಖನದಲ್ಲಿ ತಿಳಿಸಿರುವಂತಹ ಎಲ್ಲಾ ಅರ್ಹತೆಗಳನ್ನು ಹಾಗೂ ಮಾಹಿತಿಯನ್ನು ತಿಳಿದುಕೊಂಡು ನಿಗದಿಪಡಿಸಿದ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ವಿದ್ಯಾರ್ಹತೆ ಏನು?

ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಬಿಎಸ್ ಸಿ ನರ್ಸಿಂಗ್ ಪದವಿ (B. Sc Nursing) ಆಯಾ ರಾಜ್ಯ ಅಥವಾ ಭಾರತೀಯ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು.

AIIMS Nursing Officer Recruitment 2024 — ವಯೋಮಿತಿ ಅರ್ಹತೆಗಳು :

ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 18ರಿಂದ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, ವಿವಿಧ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಿದೆ.

 ಅರ್ಜಿ ಶುಲ್ಕ :

* ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ₹3,000 ರೂಪಾಯಿ ಪಾವತಿಸಬೇಕು.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ₹2,400 ರೂ. ಪಾವತಿಸಬೇಕು.

* ಅಂಗವಿಕಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಯ್ಕೆಯಾಗುವ ನರ್ಸಿಂಗ್ ಅಧಿಕಾರಿಗಳಿಗೆ ಸಿಗುವ ಮಾಸಿಕ ವೇತನ – ₹9,300 ರೂ. ಯಿಂದ ₹34,800 ರೂ. ವರೆಗೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಗಸ್ಟ್ 21, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹತೆಗಳು ನಿಗದಿತ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ :

ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅರ್ಹ ಅಭ್ಯರ್ಥಿಗಳು ಮೊದಲಿಗೆ ಎಲ್ಲಾ ಅರ್ಹತೆಗಳನ್ನು ತೆಗೆದುಕೊಂಡು ನಂತರ ಏಮ್ಸ್ ದೆಹಲಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

* ಅರ್ಜಿ ಸಲ್ಲಿಕೆ ಲಿಂಕ್ — https://www.aiimsexams.org/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version