3:00 PM Thursday 16 - October 2025

ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ-ಮೊಮ್ಮಗನ ಮೇಲೆ ಹುಲಿ ದಾಳಿ | ಹುಲಿಗೆ ಆಹಾರವಾದ ಬಾಲಕ

08/03/2021

ಕೊಡಗು: ಹುಲಿಯ ದಾಳಿಗೆ 8 ವರ್ಷದ ಬಾಲಕ ಬಲಿಯಾಗಿ 52 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

ತೋಟದ ಕೆಲಸ ಮಾಡುತ್ತಿದ್ದ ವೇಳೆ ಅಜ್ಜ ಹಾಗೂ ಮೊಮ್ಮಗನ ಮೇಲೆ ಹುಲಿ ದಾಳಿ ನಡೆಸಿದೆ. 52 ವರ್ಷ ವಯಸ್ಸಿನ ತಾತ ಕೆಂಚ ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡರೆ, ಇತ್ತ 8 ವರ್ಷದ ಬಾಲಕ ರಂಗಸ್ವಾಮಿಯನ್ನು ಹುಲಿ  ಹೊತ್ತೊಯ್ದು ಕೊಂದು ಹಾಕಿದೆ.

ಕಳೆದ 16 ದಿನಗಳಲ್ಲಿ  ಜಿಲ್ಲೆಯ ಜನತೆ ಹುಲಿ ದಾಳಿಯಿಂದ ಕಂಗೆಟ್ಟಿದ್ದಾರೆ. ಮೂವರು ವ್ಯಕ್ತಿಗಳು ಹಾಗೂ 12 ಹಸುಗಳು ಹುಲಿಗೆ ಆಹಾರವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಎದುರೇ ಹುಲಿ ದಾಳಿ ನಡೆಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version