ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಮೊದಲ ಎನ್ ಕೌಂಟರ್: ಪರಾರಿಯಾಗುತ್ತಿದ್ದ ಕಳ್ಳನ ಬಂಧನ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಯೊಬ್ಬನನ್ನು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದ್ದು, ಮಹಿಳಾ ಪೊಲೀಸರ ತಂಡ ಇದೇ ಮೊದಲ ಬಾರಿಗೆ ಎನ್ ಕೌಂಟರ್ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಕಳ್ಳತನ, ದರೋಡೆ ಮತ್ತು ಕಳ್ಳತನ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ 22 ವರ್ಷದ ಜಿತೇಂದ್ರ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿ ನಂತರ ಬಂಧಿಸಿದ್ದಾರೆ. ನಿನ್ನೆ ತಡ ರಾತ್ರಿ ದ್ವಿಚಕ್ರ ವಾಹನದಲ್ಲಿದ್ದ ಜಿತೇಂದ್ರ ಚೆಕ್ ಪಾಯಿಂಟ್ ಬಳಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಆತ ದ್ವಿಚಕ್ರ ವಾಹನದಿಂದ ಬಿದ್ದಿದ್ದನು. ಮಹಿಳಾ ಪೊಲೀಸರು ಮಾತ್ರವೇ ಇದ್ದುದನ್ನು ಕಂಡು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದ್ರೆ ಆತನ ಮೇಲೆ ಪ್ರತಿ ದಾಳಿ ನಡೆಸಿ ಬಂಧಿಸಲಾಯಿತು ಅಂತ ಹಿರಿಯ ಪೊಲೀಸ್ ಅಧಿಕಾರಿ ಉಪಾಸನಾ ಪಾಂಡೆ ತಿಳಿಸಿದರು.
ಇನ್ನೂ ಆರೋಪಿಯು ದೆಹಲಿ — ಎನ್ ಸಿಆರ್ ಪ್ರದೇಶದಲ್ಲಿ ಕೂಡ ಬೈಕ್ ಮತ್ತು ಸ್ಕೂಟರ್ ಗಳನ್ನು ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಎನ್ ಕೌಂಟರ್ ನಡೆಸಿದ ನಂತರ ಆರೋಪಿಯ ಬಳಿಯಿದ್ದು ಪಿಸ್ತೂಲ್, ಸ್ಕೂಟರ್, ಫೋನ್ ಮತ್ತು ಟ್ಯಾಬ್ಲೆಟ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ನಡೆದ ವೇಳೆ ಆರೋಪಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಕೂಡ ಆತ ಕದ್ದು ಉಪಯೋಗಿಸುತ್ತಿದ್ದ ಎಂದು ಆತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD