8:31 PM Wednesday 15 - October 2025

ಅಮ್ಮನ ಸಾವಿಗೆ ಕಾರಣವಾದ ಮಗಳ ವಾಟ್ಸಾಪ್ ಸ್ಟೇಟಸ್‌

WhatsApp1
15/02/2022

ಮುಂಬೈ: ವಾಟ್ಸಾಪ್‌ನಲ್ಲಿ ಮಗಳು ಹಾಕಿದ್ದ ಸ್ಟೇಟಸ್‌ನಿಂದ ತಾಯಿ ಕೊಲೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

20 ವರ್ಷದ ಯುವತಿ ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಒಂದನ್ನು ಹಾಕಿದ್ದು, ಅದು ಯಾರಿಗೋ ಬೈಯುವಂತಿತ್ತು. ಅದನ್ನು ಕಂಡ ಆಕೆಯ ಸ್ನೇಹಿತೆಯೊಬ್ಬಳು, ತನಗೆ ಬೈಯುವುದಕ್ಕೆ ಈ ಸ್ಟೇಟಸ್‌ ಹಾಕಿದ್ದಾಳೆ ಎಂದು ತಿಳಿದುಕೊಂಡು ಅದರ ಬಗ್ಗೆ ತನ್ನ ತಾಯಿಯ ಬಳಿ ದೂರು ನೀಡಿದ್ದಾಳೆ.

ಫೆ. 10ರಂದು ಆ ಯುವತಿ ಕುಟುಂಬವು ಸ್ಟೇಟಸ್‌ ಹಾಕಿದ್ದ ಯುವತಿಯ ತಾಯಿ ಲೀಲಾವತಿ ದೇವಿ ಬಳಿ ಬಂದು ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ವಾದ-ವಿವಾದ ನಡೆದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆಯನ್ನೂ ಮಾಡಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಲೀಲಾವತಿ ದೇವಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಾಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಹುಕೋಟಿ ಮೇವು ಹಗರಣ: ಲಾಲೂ ಪ್ರಸಾದ್ ಯಾದವ್‌ ದೋಷಿ; ಸಿಬಿಐ ಕೋರ್ಟ್‌

ಜಮೀನಿನಲ್ಲಿ ಕುಳಿತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಶಬರಿಮಲೆಗೆ ತೆರಳಿದ ಕರ್ನಾಟಕದ ಟಿಟಿ ವಾಹನ ಅಪಘಾತ: ಮೂವರ ಸಾವು, 11 ಮಂದಿಗೆ ಗಾಯ

ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ

Exit mobile version