14 ವರ್ಷ ಬ್ಯಾಂಕಿಂಗ್ ನಲ್ಲಿ ಕೆಲಸ ಮಾಡಿದ್ದರೂ ಫುಟ್ಪಾತ್ ನಲ್ಲಿ ಕುಳಿತ ನಿರುದ್ಯೋಗಿ!

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿದ್ದರೂ, ನಿರುದ್ಯೋಗಿಯಾಗಿರುವ ಯುವಕನೊಬ್ಬ ಸಹಾಯ ಕೇಳುತ್ತಾ ಫುಟ್ಪಾತ್ ನಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.
ಬೆಂಗಳೂರಿನ ಪಾದಚಾರಿ ಮಾರ್ಗದಲ್ಲಿ ಯುವಕ ಕುಳಿತಿದ್ದು, ಕೈನಲ್ಲಿ ಕರಪತ್ರವೊಂದನ್ನು ಹಿಡಿದು, ನನಗೆ ಕೆಲಸವೂ ಇಲ್ಲ, ಮನೆಯೂ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನನಗ ಬ್ಯಾಂಕಿಂಗ್‌ನಲ್ಲಿ 14 ವರ್ಷಗಳ ಅನುಭವವಿದೆ. ಆದರೂ ನಾನು ನಿರುದ್ಯೋಗಿ ಮತ್ತು ನಿರಾಶ್ರಿತ ಎಂದು ಬರಯಲಾಗಿದೆ.
QR ಕೋಡ್ ಮುದ್ರಿಸಿದ ಹಾಳೆಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಯುವಕ ಡಿಜಿಟಲ್ ಮೂಲಕ ದೇಣಿಗೆ ಕೇಳುತ್ತಿರುವ ದೃಶ್ಯ ಕಂ ಡು ಬಂದಿದೆ.
ಈ ಫೋಟೋ ಸಾಮಾಜಿಕ ಮಾಧ್ಯಮ ರೆಡ್ಡಿಟ್ ನಲ್ಲಿ ಪೋಸ್ಟ್ ಆಗಿದ್ದು, ಈ ಪೋಸ್ಟ್ ಗೆ ಜನರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD