ಬಾಂಗ್ಲಾದೇಶದಿಂದ ಬಂದ್ರು 13 ಜನ ಮೀನುಗಾರರು: ಬೇಕುಂತ ಬಂದದ್ದಲ್ಲ, ದಾರಿತಪ್ಪಿ ಬಂದದ್ದು!

bangladeshi fishermen
01/12/2025

ಆಂಧ್ರ ಪ್ರದೇಶ:  ಮೀನುಗಾರಿಕೆಗೆ ಹೊರಟಿದ್ದ ಬಾಂಗ್ಲಾದೇಶದ 13 ಪ್ರಜೆಗಳು ದಾರಿತಪ್ಪಿ ಭಾರತದ ಜಲಸೀಮೆ ಪ್ರವೇಶಿಸಿದ ಘಟನೆ ನಡೆದಿದೆ. ಇದರ ಜೊತೆಗೆ ಕಳೆದ 20 ದಿನಗಳಿಂದ ಈ 13 ಮೀನುಗಾರರು ಸಮುದ್ರದಲ್ಲಿ ಸಿಲುಕಿದ್ದರು ಎನ್ನುವುದು ಕೂಡ ಬಯಲಿಗೆ ಬಂದಿದೆ.

ನಡೆದಿದ್ದೇನು?:  ಬಾಂಗ್ಲಾದೇಶದ ಭೋಲಾ ಜಿಲ್ಲೆಯವರಾದ 13 ಮೀನುಗಾರರು  ನವೆಂಬರ್ 10ರಂದು ಮೀನುಗಾರಿಕೆಗೆ ಅಂತ ಬೋಟ್ ನಲ್ಲಿ ತೆರಳಿದ್ದಾರೆ. ಆದ್ರೆ, ಸಮುದ್ರದ ಮಧ್ಯೆ ಬೋಟ್ ನ ಎಂಜಿನ್ ಕೆಟ್ಟು ಹೋಗಿದೆ. ಹೀಗಾಗಿ ಸಮುದ್ರದಲ್ಲಿ ಗಾಳಿ ಬೀಸಿದ ಕಡೆಗೆ ಬೋಟ್ ತೇಲುತ್ತಾ ಸಾಗಿದೆ. ಕೊನೆಗೆ ಆಂಧ್ರಪ್ರದೇಶದ ಶ್ರೀಕಾಕುಲಂ ಬಂದರಿಗೆ ದೋಣಿ ತಲುಪಿದೆ.

ಆಹಾರ ಇಲ್ಲದೇ ಒದ್ದಾಟ:  ಮೀನುಗಾರಿಕೆಗೆ ಹೊರಟ ವೇಳೆ 7 ದಿನಗಳಿಗೆ ಬೇಕಾಗುವಷ್ಟು ಆಹಾರವನ್ನು ಮೀನುಗಾರರು ತಂದಿದ್ದರು. ಆದ್ರೆ ಬೋಟ್ ನ ಎಂಜಿನ್ ಕೈಕೊಟ್ಟ ಕಾರಣ ಕಳೆದ 20 ದಿನಗಳಿಂದ ಮೀನುಗಾರರು ಸಮುದ್ರದ ನಡುವೆ ಸಿಲುಕಿದ್ದರು. ಹೆಚ್ಚು ಸಮಯ ಕಾಲ ಮೀನುಗಾರರು ನೀರು ಸೇವಿಸಿಯೇ ಬದುಕುಳಿದಿದ್ದರು.

ಬೇಕುಂತ ಬಂದದ್ದಲ್ಲ: ಸಮುದ್ರದಲ್ಲಿ ವಿದೇಶಿ ದೋಣಿಯೊಂದು ತೇಲುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಾರತದ ವಿಶೇಷ ಆರ್ಥಿಕ ವಲಯಕ್ಕೆ ವಿದೇಶಿ ದೋಣಿಗಳು ಬರಬೇಕಿದ್ದರೆ, ಅನುಮತಿ ಕಡ್ಡಾಯವಾಗಿರುತ್ತದೆ. ಅನುಮತಿ ಇಲ್ಲದೇ ಬಂದರೆ, ಭಾರತದ ಸಮುದ್ರ ವಲಯಗಳ ಕಾಯಿದೆ 1981ರ ವಿವಿಧ ಕಲಂಗಳನ್ನು ಉಲ್ಲಂಘಿಸುತ್ತದೆ. ಸದ್ಯ ಮೀನುಗಾರರು ಉದ್ದೇಶ ಪೂರ್ವಕವಾಗಿ ಬಂದಿಲ್ಲ ಎನ್ನುವುದು ತಿಳಿದು ಬಂದಿದೆ.  ಸದ್ಯ ಬಾಂಗ್ಲಾದೇಶದ ಅಧಿಕಾರಿಗಳು ಭಾರತದಿಂದ ಮಾಹಿತಿ ತಿಳಿಸಲಾಗಿದೆ. ಮುಂದಿನ ಪ್ರಕ್ರಿಯೆಗಳು ಇನ್ನು ಮುಂದೆ ನಡೆಯಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version