ಹೊಸ ಸ್ಥಳ ತೋರಿಸಿದ ಅನಾಮಿಕ: ಕಳೇಬರ ಸಿಕ್ಕಿದೆಯೇ?

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವೆಡೆಗಳಲ್ಲಿ ಮೃತದೇಹ ಹೂತಿರುವ ಸಾಕ್ಷಿ ದೂರುದಾರ ತೋರಿಸಿದ ಹೊಸ ಸ್ಥಳಗಳಲ್ಲಿ ಇಂದು ಶೋಧ ಕಾರ್ಯ ನಡೆಸಲು ಎಸ್ ಐಟಿ ಮುಂದಾಗಿದೆ.
ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ಒಳಗೆ ಶೋಧ ನಡೆಸಲು ದೂರುದಾರ ಸಾಕ್ಷಿಯನ್ನು ಎಸ್ ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಈ ಸ್ಪಾಟ್ ಗೆ ತೆರಳಲು ಖಾಸಗಿ ಜಾಗದ ಗೇಟ್ ಹಾದು ಹೋಗಬೇಕಿರುವ ಹಿನ್ನೆಲೆ ಸಂಬಂಧಿಸಿದ ವ್ಯಕ್ತಿಯನ್ನು ಸ್ಥಳಕ್ಕೆ ಕರೆದು ಎಸ್ ಐಟಿ ಅಧಿಕಾರಿಗಳು ಅನುಮತಿ ಪಡೆದುಕೊಂಡು ಹೋಗಿದ್ದಾರೆ. ಗೇಟ್ ನ ಕೀ ತರಿಸಿ ಗೇಟ್ ತೆಗೆದು ಎಸ್ ಐಟಿ ಸ್ಥಳಕ್ಕೆ ತೆರಳಿದೆ.
ಗೇಟ್ ನಿಂದ ಮುಂದೆ ಹೋಗಲು ಹೊರಗಿನವರಿಗೆ ಅವಕಾಶ ನೀಡಲಾಗಿಲ್ಲ, ತೋಟದೊಳಗೆ ಅಗೆಯುವ ಕಾರ್ಯ ನಡೆಸಲಾಗುತ್ತಿದೆ. ಅನಾಮಿಕ 30ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಅಂತೆಯೇ ಆತ ಹೇಳಿದ ಎಲ್ಲ ಸ್ಥಳಗಳಲ್ಲೂ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಲಿದ್ದಾರೆ ಎನ್ನಲಾಗಿದೆ.
ಹೊಸ ಜಾಗದಲ್ಲಿ ಕಳೇಬರ ಸಿಗುತ್ತಾ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಎಸ್ ಐಟಿ ಅಧಿಕಾರಿಗಳು ತಮ್ಮ ತನಿಖಾ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಅನಾಮಿಕನ ಹೇಳಿಕೆಯಂತೆ ಎಸ್ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD