ನಮ್ಮ ಮೆಟ್ರೋದಲ್ಲಿ ವಿದೇಶಿ ಪ್ರವಾಸಿಗನ ದುರಾಹಂಕಾರಿ ವರ್ತನೆ: ಚಾಲೆಂಜ್ ಹಾಕಿ ಟಿಕೆಟ್ ಇಲ್ಲದೇ ಪ್ರಯಾಣ

banglore
23/09/2023

ಬಿಲಿಯನೇರ್ ಎಲೋನ್ ಮಾಸ್ಕ್ ನ್ನು ತಬ್ಬಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ(YouTuber Fidias Panayiotou) ಭಾರತದ ಮೆಟ್ರೋ ರೈಲಿನಲ್ಲಿ ಟಿಕೆಟ್ ಇಲ್ಲದೇ ಹೇಗೆ ಪ್ರಯಾಣಿಸಬಹುದು ಎನ್ನುವ ವಿಡಿಯೋ ಮಾಡಿದ್ದು, ಈ ವಿಡಿಯೋಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಫಿಡಿಯಾಸ್ ಪನಾಯೊಟೌ ಟಿಕೆಟ್ ಚೆಕ್ಕಿಂಗ್ ಕೌಂಟರ್ ನ್ನು ದಾಟಿಕೊಂಡು ಹೋಗಿ ಮೆಟ್ರೋ ರೈಲನ್ನು ರಾಜಾರೋಷವಾಗಿ ಏರುತ್ತಾರೆ. ಬಳಿಕ ಇನ್ನೊಂದು ಸ್ಟೇಷನ್ ನಲ್ಲಿ ಇಳಿದು ರಾಜಾರೋಷವಾಗಿ ಟಿಕೆಟ್ ಚೆಕ್ಕಿಂಗ್ ಕೌಂಟರ್ ನ್ನು ದಾಟಿ ಮುಂದೆ ಹೋಗುತ್ತಾರೆ.

ಬೆಂಗಳೂರು, ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್ ಈ ಹುಚ್ಚಾಟ ಮೆರೆದಿದ್ದಾರೆ. ವಿಡಿಯೋದಲ್ಲಿ ಜನಪ್ರಿಯತೆ ಗಳಿಸುವುದಕ್ಕಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವ ಫಿಡಿಯಾಸ್ ಪನಾಯೊಟೌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ದೇಶಕ್ಕೆ ತನ್ನದೇ ಆದ ಘನತೆ ಇರುವ ಕಾನೂನು ಇದೆ. ಈ ನೆಲಕ್ಕೆ ಬಂದವರು ಅದನ್ನು ಪಾಲಿಸಬೇಕು. ಇಲ್ಲಿನ ಕಾನೂನನ್ನು ತಾನು ಬ್ರೇಕ್ ಮಾಡಿದ್ದೇನೆ ಎನ್ನುವ ದುರಾಹಂಕಾರ ತೋರಿರುವ ಫಿಡಿಯಾಸ್ ಪನಾಯೊಟೌನನ್ನು ತಕ್ಷಣವೇ ಭಾರತಕ್ಕೆ ಆಗಮಿಸದಂತೆ ನಿಷೇಧ ಮಾಡಬೇಕು ಎನ್ನುವ ಆಕ್ರೋಶ ವ್ಯಕ್ತವಾಗಿದೆ.

 

ಇತ್ತೀಚಿನ ಸುದ್ದಿ

Exit mobile version